ನವದೆಹಲಿ, ಜು. 24 (DaijiworldNews/AA): ಸಂಸತ್ತಿನ ಮುಂಗಾರು ಅಧಿವೇಶನದ 5ನೇ ದಿನವೂ ಲೋಕಸಭೆಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಗದ್ದಲ ಮುಂದುವರಿದಿದೆ. ಈ ಹಿನ್ನೆಲೆ, ಕಲಾಪವನ್ನ ಜುಲೈ 27ರ ಬೆಳಗ್ಗೆ 11 ಗಂಟೆಯವರೆಗೆ ಮುಂದೂಡಲಾಗಿದೆ.

ಸಂಸತ್ತಿನ ಮುಂಗಾರು ಅಧಿವೇಶನದ 5ನೇ ದಿನವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಮುಂದುವರಿಯಿತು. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಲೋಕಸಭೆ ಸದನ ಪುನಾರಂಭಗೊಂಡ ಕೆಲವೇ ಕ್ಷಣಗಳಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು.
ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಸದನ ಆರಂಭವಾಗುತ್ತಿದ್ದಂತೆಯೇ 'ಎಜುಕೇಶನ್ ಮಿನಿಸ್ಟರ್ ರಿಸೈನ್', 'ಇಸ್ತೀಫಾ, ಇಸ್ತೀಫಾ' ಎಂದು ಘೋಷಣೆ ಕೂಗಿದರು. ಇದರಿಂದ ಸದನದಲ್ಲಿ ಭಾರೀ ಗದ್ದಲ ಉಂಟಾಗಿ, ಲೋಕಸಭೆಯ ಕಲಾಪವನ್ನು ಸೋಮವಾರದ ವರೆಗೆ ಮುಂದೂಡಲಾಯಿತು.