ಬೆಂಗಳೂರು, ಜು. 23 (DaijiworldNews/AK): ರಾಜ್ಯದ ಗ್ರಾಹಕರಿಗೆ ಸರ್ಕಾರ ದರ ಏರಿಕೆ ಶಾಕ್ ಕೊಟ್ಟಿದೆ. ಬೆಣ್ಣೆ ಮತ್ತು ತುಪ್ಪ ದರವನ್ನು ಹೆಚ್ಚಳ ಮಾಡಿದೆ.

ತುಪ್ಪದ ಬೆಲೆ ಕೆಜಿಗೆ 15 ರೂ., ಬೆಣ್ಣೆ ದರ ಕೆಜಿಗೆ 22 ರೂ. ದರ ಹೆಚ್ಚಿಸಲಾಗಿದೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ. ಎಲ್ಲಾ ಕೆಎಂಎಫ್ ಮಳಿಗೆಗಳಲ್ಲೂ ದರ ಏರಿಕೆ ಆಗಲಿದೆ.
ಹಾಲಿನ ಉತ್ಪನ್ನಗಳ ದರ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಿದೆ. ತುಪ್ಪ, ಬೆಣ್ಣೆ ಖರೀದಿ ದುಬಾರಿಯಾಗಿದೆ. ಇದರಿಂದ ಗೃಹ ಬಳಕೆ ಹಾಗೂ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಲಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ಏರಿಕೆ ಮಾಡಲಾಗಿದೆ.
ಸದ್ಯ ತುಪ್ಪ ಕೆ.ಜಿಗೆ 700 ರೂಪಾಯಿ ಇದೆ. ನಾಳೆಯಿಂದ ನಂದಿನಿ ತುಪ್ಪ ಕೆ.ಜಿಗೆ 715 ರೂಪಾಯಿ ಆಗಲಿದೆ. ಬೆಣ್ಣೆ ಅರ್ಧ ಕೆ.ಜಿಗೆ 610 ರೂಪಾಯಿ ಇದೆ. ನಾಳೆಯಿಂದ 660 ರೂಪಾಯಿಗೆ ಏರಿಕೆಯಾಗಲಿದೆ .