ನವದೆಹಲಿ, ಜು. 22 (DaijiworldNews/AA): ಜುಲೈ 20 ರಂದು ನಡೆದ ಬೃಹತ್ ಪ್ರತಿಭಟನೆ ಕೇವಲ ಟ್ರೈಲರ್ ಅಷ್ಟೇ, ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ದೆಹಲಿಗೆ ಲಗ್ಗೆ ಇಡಲಿದ್ದಾರೆ" ಎಂದು ಕಾಕ್ರೋಚ್ ಜನತಾ ಪಾರ್ಟಿ ಎಚ್ಚರಿಕೆ ನೀಡಿದೆ.

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ ಪ್ರತಿಕ್ರಿಯಿಸಿ, NEET-UG ಪರೀಕ್ಷಾ ಅಕ್ರಮ ಹಾಗೂ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಹಮ್ಮಿಕೊಂಡಿದ್ದ 'ಸಂಸದ್ ಚಲೋ' ರ್ಯಾಲಿ ಮೇಲಿನ ಪೊಲೀಸ್ ಕ್ರಮದ ಕುರಿತು ಮಾತನಾಡಿದ ಅವರು, "ವಿದ್ಯಾರ್ಥಿ ಸಮೂಹವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆಗೆ ಹಾಗೂ ಸಮಗ್ರ ಶಿಕ್ಷಣ ಸುಧಾರಣೆಗೆ ಪಟ್ಟು ಹಿಡಿದಿದೆ. ತನಿಖಾ ಸಂಸ್ಥೆಗಳು ಉಗ್ರ ನಿಗ್ರಹ ಕಾಯ್ದೆ ಅಥವಾ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಪ್ರಕರಣ ದಾಖಲಿಸಿದರೂ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ" ಎಂದಿದ್ದಾರೆ.
"ಜುಲೈ 20ರಂದು ನಡೆದ ಪ್ರತಿಭಟನೆ ಕೇವಲ ಟ್ರೈಲರ್ ಮಾತ್ರ. ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಯುವಕರು ದೆಹಲಿಗೆ ಬಂದು ಐತಿಹಾಸಿಕ ಹೋರಾಟ ನಡೆಸಲಿದ್ದಾರೆ. ಇದು ಸ್ವಾತಂತ್ರ್ಯಾನಂತರ ಭಾರತದ ಅತಿದೊಡ್ಡ ಜನಾಂದೋಲನವಾಗಲಿದೆ. ಸರ್ಕಾರ ತನ್ನ ನಿಲುವು ಬದಲಿಸದಿದ್ದರೆ ದೇಶದ ಯುವಜನತೆ ತಕ್ಕ ಉತ್ತರ ನೀಡಲಿದೆ" ಎಂದು ತಿಳಿಸಿದ್ದಾರೆ.