ಪಣಜಿ, ಜು. 19 (DaijiworldNews/AA): ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾ ಬಿಜೆಪಿ ಶಾಸಕಿ ಮತ್ತು ಮಾಜಿ ಸಚಿವೆ ಜೆನ್ನಿಫರ್ ಮಾನ್ಸೆರಾಟ್ಟೆ (56) ಕೊನೆಯುಸಿರೆಳೆದಿದ್ದಾರೆ.

ಜೆನ್ನಿಫರ್ ಅವರು ಉತ್ತರ ಗೋವಾ ಜಿಲ್ಲೆಯ ತಲೈಗಾವೊ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರು ಈ ಕ್ಷೇತ್ರವನ್ನು 2012 ರಿಂದ ಪ್ರತಿನಿಧಿಸುತ್ತಿದ್ದರು.
ಜೆನ್ನಿಫರ್ ಅವರು ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. 2019 ರಲ್ಲಿ ಅವರಿಗೆ ಸಚಿವೆ ಸ್ಥಾನ ಕೂಡ ಲಭಿಸಿತ್ತು. 2019 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ 10 ಕಾಂಗ್ರೆಸ್ ಶಾಸಕರಲ್ಲಿ ಜೆನ್ನಿಫರ್ ಕೂಡ ಒಬ್ಬರು.
"ತಲೈಗಾವೊದ ಮೊದಲ ಮಹಿಳಾ ಶಾಸಕಿ ಮತ್ತು ಮೂರು ಬಾರಿ ಶಾಸಕಿಯಾಗಿ ಜನ್ನಿಫರ್ ಸೇವೆ ಸಲ್ಲಿಸಿದ್ದಾರೆ. ಅವರು ಇಹಲೋಕ ತ್ಯೆಜಿಸಿದ್ದು, ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ" ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.