ತಿರುವನಂತಪುರ, ಜು. 14 (DaijiworldNews/TA): ಕೇರಳದ ಅತ್ಯಂತ ಜನಪ್ರಿಯ ಹಬ್ಬ ಓಣಂ ಸಂಭ್ರಮ ದಿನಗಳು ಸಮೀಪಿಸುತ್ತಿದೆ. ಈ ಬೆನ್ನಲ್ಲೇ, ಭಾರತೀಯ ರೈಲ್ವೆ ಇಲಾಖೆಯು ಕೇರಳದಲ್ಲಿ ಓಣಂ ಪ್ರಯುಕ್ತ ಹೆಚ್ಚಿನ ವಿಶೇಷ ರೈಲುಗಳ ಸೇವೆಯನ್ನು ಘೋಷಿಸಿದ್ದು, ಮುಗಂಡ ಬುಕ್ಕಿಂಗ್ ಆರಂಭಗೊಂಡಿದೆ. ತಿರುವನಂತಪುರ ನಾರ್ತ್ನಿಂದ ಮಂಗಳೂರಿಗೆ, ಚೆನ್ನೈನಿಂದ ಕೊಲ್ಲಂಗೆ ಮತ್ತು ಬೆಂಗಳೂರಿನಿಂದ ಎರ್ನಾಕುಲಳಂಗೆ ರೈಲುಗಳ ಸೇವೆ ಇದ್ದು, ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭಗೊಂಡಿದೆ.

ತಿರುವನಂತಪುರ ನಾರ್ತ್ -ಮಂಗಳೂರು ಜಂಕ್ಷನ್ :ಆಗಸ್ಟ್ 12, 19, 26 ಮತ್ತು ಸೆಪ್ಟೆಂಬರ್ 2 ರಂದು ತಿರುವನಂತಪುರ ನಾರ್ತ್ ನಿಂದ ಮಂಗಳೂರಿಗೆ ವಿಶೇಷ ರೈಲು ಸೇವೆ ಆರಂಭವಾಗಲಿದೆ. ತಿರುವನಂತಪುರದಿಂದ ಬೆಳಗ್ಗೆ 9 ಗಂಟೆಗೆ ಹೊರಡುವ ರೈಲು (06093) ರಾತ್ರಿ 9 ಗಂಟೆಗೆ ಮಂಗಳೂರನ್ನು ತಲುಪುತ್ತದೆ. ಆಗಸ್ಟ್ 13, 20, 27 ಮತ್ತು ಸೆಪ್ಟೆಂಬರ್ 3 ರಂದು ಮಧ್ಯಾಹ್ನ 3.15ಕ್ಕೆ ಮಂಗಳೂರಿನಿಂದ ಹೊರಡುವ ರೈಲು (06094) ಮರುದಿನ ಬೆಳಿಗ್ಗೆ 5.30 ಕ್ಕೆ ತಿರುವನಂತಪುರ ಸೆಂಟ್ರಲ್ ತಲುಪುತ್ತದೆ.
ಬೆಂಗಳೂರು-ಎರ್ನಾಕುಳಂ : ಎರ್ನಾಕುಳಂ- ಬೆಂಗಳೂರು ಎಸ್ಎಂವಿಟಿ ಎಕ್ಸ್ಪ್ರೆಸ್ (06147) ಇದು ಆಗಸ್ಟ್ 9, 16, 23, 30 ಮತ್ತು ಸೆಪ್ಟೆಂಬರ್ 6 ರಂದು ರಾತ್ರಿ 11.10 ಕ್ಕೆ ಎರ್ನಾಕುಳಂ ಜಂಕ್ಷನ್ನಿಂದ ಹೊರಟು ಮರುದಿನ ಮಧ್ಯಾಹ್ನ 12.45ಕ್ಕೆ ಬೆಂಗಳೂರು ತಲುಪುತ್ತದೆ. ಇದು ಆಲುವಾ, ತ್ರಿಶ್ಶೂರ್, ಪಾಲಕ್ಕಾಡ್, ಪೊತ್ತನ್ನೂರ್, ತಿರುಪುರ್, ಈರೋಡ್, ಸೇಲಂ, ಕುಪ್ಪಂ, ಬಂಗಾರಪೇಟೆ ಮತ್ತು ಕೃಷ್ಣ ರಾಜಪುರಗಳಲ್ಲಿ ನಿಲುಗಡೆಯನ್ನು ಹೊಂದಿದೆ.
ಬೆಂಗಳೂರು -ಎರ್ನಾಕುಳಂ ಎಕ್ಸ್ಪ್ರೆಸ್ (06148) ಆಗಸ್ಟ್ 10, 17, 24 ಮತ್ತು 31 ರಂದು ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 5.45 ಕ್ಕೆ ಎರ್ನಾಕುಳಂ ತಲುಪಲಿದೆ. ಈ ರೈಲು ಕೆಆರ್ ಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪುರ್, ಪೋತನ್ನೂರ್, ಪಾಲಕ್ಕಾಡ್, ತ್ರಿಶೂರ್ ಮತ್ತು ಅಲುವಾದಲ್ಲಿ ನಿಲುಗಡೆ ಹೊಂದಿದೆ.
ಚೆನ್ನೈ ಸೆಂಟ್ರಲ್-ಕೊಲ್ಲಂ: ರೈಲು (06117) ಆಗಸ್ಟ್ 13, 15, 20, 22, 27, 29 ಮತ್ತು ಸೆಪ್ಟೆಂಬರ್ 3 ಮತ್ತು 5 ರಂದು ರಾತ್ರಿ 11.50 ಕ್ಕೆ ಚೆನ್ನೈನ ಸೆಂಟ್ರಲ್ ನಿಂದ ಹೊರಟು ಮರುದಿನ ಸಂಜೆ 4.20ಕ್ಕೆ ಕೊಲ್ಲಂ ತಲುಪಲಿದೆ. ರೈಲು (06118) ಆಗಸ್ಟ್ 14, 16, 21, 23, 28, 30 ಮತ್ತು ಸೆಪ್ಟೆಂಬರ್ 4 ಮತ್ತು 6 ರಂದು ಸಂಜೆ 6.45 ಕ್ಕೆ ಕೊಲ್ಲಂನಿಂದ ಹೊರಟು ಮರುದಿನ ಬೆಳಗ್ಗೆ 11.35 ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ.