ಲಕ್ನೋ, ಜು. 10 (DaijiworldNews/AK): ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಒಂದೂವರೆ ವರ್ಷದ ಗಂಡು ಮಗುವನ್ನು ನೆಲಕ್ಕೆ ಬಡಿದು ಕೊಂದ ಆರೋಪಿಗೆ ಕೇವಲ 40 ದಿನಗಳಲ್ಲಿ ಗಲ್ಲುಶಿಕ್ಷೆ ಆಗಿದೆ.

ಆರವ್ ಕೊಲೆಯಾದ ಮಗು. ಆರೋಪಿಯನ್ನು ಜಿತೇಂದ್ರ ಅಲಿಯಾಸ್ ವಿರಾಜ್ ಎಂದು ಗುರುತಿಸಲಾಗಿದೆ.
ಫಿರೋಜಾಬಾದ್ ಜಿಲ್ಲಾ ನ್ಯಾಯಾಯಲವು ಆರೋಪಿ ಜಿತೇಂದ್ರಗೆ ಮರಣದಂಡನೆ ವಿಧಿಸಿದೆ. ಕೌಟುಂಬಿಕ ಕಲಹದಿಂದಾಗಿ ಗಂಡನಿಂದ ದೂರವಾಗಿ ಅಪ್ಪನ ಮನೆಗೆ ಬಂದಿದ್ದ ಶಿಕ್ಷಕಿ ರತಿದೇವಿ (24) ಎಂಬ ವಿವಾಹಿತೆಯನ್ನು ಮದುವೆ ಆಗುವಂತೆ ಕಿರಾಣಿ ಶಾಪ್ ನಡೆಸ್ತಿದ್ದ ಜಿತೇಂದ್ರ (25) ಪೀಡಿಸುತ್ತಿದ್ದ. ಆದರೆ, ನನಗೆ ಈಗಾಗಲೇ ಮದುವೆಯಾಗಿದೆ. ಒಂದೂವರೆ ವರ್ಷದ ಮಗನೂ ಇದ್ದಾನೆ ಅಂತ ಆಕೆ ತಿರಿಸ್ಕರಿಸುತ್ತಲೇ ಇದ್ದಳು.
ಇದರಿಂದ ಸಿಟ್ಟಿಗೆದ್ದಿದ್ದ ಆತ, ಈ ಮಗುವೇ ಅಡ್ಡಿಯಾಗಿದೆ ಅಂತ ಕೊಲೆ ಸಂಚು ರೂಪಿಸಿದ್ದ. ಮೇ 31ರಂದು ಚಾಕ್ಲೆಟ್ ಕೊಡಿಸುವುದಾಗಿ ಮಗುವನ್ನು ಎತ್ತೊಯ್ದು ನೆಲಕ್ಕೆ ಬಡಿದು ಕೊಂದಿದ್ದ. ನಂತರ ಎಸ್ಕೇಪ್ ಆಗಿದ್ದ. ಆದರೆ, ಪೊಲೀಸರು ಗುಂಡು ಹಾರಿಸಿ ಬಂಧಿಸಿ ಜೈಲಿಗಟ್ಟಿದ್ದರು.