ಪುಣೆ, ಜು. 08 (DaijiworldNews/AA): ಭಾರೀ ಮಳೆ ಸುರಿದ ಬೆನ್ನಲ್ಲೇ ಮೂರು ಅಂತಸ್ತಿನ ಕಟ್ಟಡದ ಮೇಲೆ ಬೃಹತ್ ಕಸದ ರಾಶಿ ಕುಸಿದು ಬಿದ್ದ ಪರಿಣಾಮ, ಕಟ್ಟಡವೂ ಕುಸಿದಿದ್ದು, ಅವಶೇಷದಡಿ ಕನಿಷ್ಠ 16 ಜನರು ಸಿಲುಕಿಕೊಂಡಿರುವ ಘಟನೆ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ನಲ್ಲಿ ಬುಧವಾರ ನಡೆದಿದೆ.

ಮೋಶಿಯಲ್ಲಿ ಈ ಘಟನೆ ಸಂಭವಿಸಿದೆ. ನಾಗರಿಕ ಸಂಸ್ಥೆಯ ಪರವಾಗಿ ಖಾಸಗಿ ಕಂಪನಿಯ ತ್ಯಾಜ್ಯ ಸಂಸ್ಕರಣಾ ಕಚೇರಿಯಾಗಿ ಕಟ್ಟಡವನ್ನು ಬಳಸಲಾಗುತ್ತಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ಗಳ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಆಡಳಿತಾತ್ಮಕ ಕಟ್ಟಡ. ಪರ್ವತದಂತಹ ತ್ಯಾಜ್ಯದ ರಾಶಿಯ ಪಕ್ಕದಲ್ಲಿದೆ. ಪ್ರಾಥಮಿಕವಾಗಿ, ಭಾರೀ ಮಳೆಯಿಂದಾಗಿ, ತ್ಯಾಜ್ಯ ದಿಬ್ಬ ಸಡಿಲಗೊಂಡು ಕಟ್ಟಡದ ಮೇಲೆ ಕುಸಿದಿದೆ ಎಂದು ತೋರುತ್ತದೆ. ಖಾಸಗಿ ಕಂಪನಿಯ 16 ಉದ್ಯೋಗಿಗಳು ಕಟ್ಟಡದೊಳಗೆ ಇದ್ದಾರೆ" ಎಂದು ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತ ವಿಜಯ್ ಸೂರ್ಯವಂಶಿ ಮಾಹಿತಿ ನೀಡಿದ್ದಾರೆ.