ನವದೆಹಲಿ, ಜು. 08 (DaijiworldNews/AA): ಎಥನಾಲ್ ಮಿಶ್ರಿತ ಪೆಟ್ರೋಲ್ (ಇ20) ಬಳಕೆಯಿಂದ ಹಾನಿಯಾದ ಒಂದೇ ಒಂದು ಕಾರು ತೋರಿಸಿ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸವಾಲೆಸೆಗಿದ್ದಾರೆ.

ಇ20 ಪೆಟ್ರೋಲ್ನಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂಬ ಟೀಕೆಗಳ ವಿಚಾರವಾಗಿ ವಿಕಸಿತ್ ಭಾರತ್ ಕಾನ್ಕ್ಲೇವ್ನಲ್ಲಿ ಮಾತನಾಡಿದ ಅವರು, ಎಥನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಮಾಹಿತಿ ಮತ್ತು ಸುಳ್ಳು ಪ್ರತಿಪಾದನೆಗಳು ಹರಡಲಾಗುತ್ತಿದೆ. ಇ20 ಪೆಟ್ರೋಲ್ನಿಂದ ಸಮಸ್ಯೆ ಎದುರಿಸುತ್ತಿರುವ ಯಾವ ಕಾರೂ ಇಲ್ಲ. ದೇಶದಲ್ಲಿ ಯಾವುದಾದರೂ ಕಾರು ಸಮಸ್ಯೆ ಎದುರಿಸಿದೆಯೇ? ಒಂದನ್ನಾದರೂ ಹೆಸರಿಸಿ. ಇದು ಪ್ರಾಯೋಜಿತ ಅಭಿಯಾನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂಧನ ಕ್ಷಮತೆ ಕುಸಿಯುತ್ತಿದೆ. ಹಳೆಯ ವಾಹನಗಳಲ್ಲಿ ಹೊಂದಾಣಿಕೆ ಸಮಸ್ಯೆ ಉಂಟಾಗುತ್ತಿದೆ. ದೀರ್ಘಕಾಲೀನವಾಗಿ ಇಂಜಿನ್ಗೆ ಹಾನಿಯಾಗುತ್ತದೆ ಎಂದು ಇ20 ಪೆಟ್ರೋಲ್ ಬಳಕೆಯಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂದು ಆರೋಪಗಳು ಕೇಳಿಬಂದ ಬೆನ್ನಲ್ಲೇ ಗಡ್ಕರಿ ಅವರು ಈ ಹೇಳಿಕೆ ನೀಡಿದ್ದಾರೆ.