ಭೋಪಾಲ್ , ಜು. 07 (DaijiworldNews/AK):ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದಷ್ಟೇ ಅಲ್ಲದೇ ಕೆಲ ಐಎಎಸ್, ಐಪಿಎಸ್ ಅಧಿಕಾರಿಗಳು ತಮ್ಮ ವ್ಯಕ್ತಿತ್ವದ ಮೂಲಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅಂತವರ ಸಾಲಿನಲ್ಲಿ ಐಪಿಎಸ್ ಸಚಿನ್ ಅತುಲ್ಕರ್ ಅವರ ಸ್ಪೂರ್ತಿದಾಯಕ ಕಥೆ.

ತನ್ನ ಫಿಟ್ ನೆಸ್ ನಿಂದ ಇವರು ಬಾಲಿವುಡ್ ಸೆಲೆಬ್ರಿಟಿಗಳನ್ನು ಸಹ ಹಿಂದಿಕ್ಕಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಎಸಿಪಿ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಪ್ರಸ್ತುತ ಮಧ್ಯಪ್ರದೇಶ ಕೇಡರ್ ನಲ್ಲಿ ಕರ್ತವ್ಯದಲ್ಲಿದ್ದಾರೆ. IPS ಸಚಿನ್ ಅತುಲ್ಕರ್ ಯಶಸ್ಸಿನ ಕಥೆ ಇಲ್ಲಿದೆ.
IPS ಸಚಿನ್ ಅತುಲ್ಕರ್ ಅವರು 8 ಆಗಸ್ಟ್ 1984 ರಂದು ಜನಿಸಿದ್ದಾರೆ. ಸಚಿನ್ ಅತುಲ್ಕರ್ 2007 ರಲ್ಲಿ ಕೇವಲ 23 ನೇ ವಯಸ್ಸಿನಲ್ಲಿ ಐಪಿಎಸ್ ಅಧಿಕಾರಿಯಾದರು. ಅವರ ಹೆಸರಿನಲ್ಲಿ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿ ಎಂಬ ದಾಖಲೆ ಇದೆ. ಅವರು ತಮ್ಮ ಫಿಟ್ನೆಸ್ ಮತ್ತು ವ್ಯಾಯಾಮದ ದಿನಚರಿಗಾಗಿ ಪ್ರಸಿದ್ಧರಾಗಿದ್ದಾರೆ. ಐಪಿಎಸ್ ಸಚಿನ್ ಅತುಲ್ಕರ್ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಅವರು ಅತ್ಯಂತ ಕಿರಿಯ ಡಿಐಜಿ ಎನಿಸಿಕೊಂಡರು. ಪ್ರಸ್ತುತ, ಅವರು ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್ ನಲ್ಲಿ ಎಸಿಪಿಯಾಗಿ ನಿಯೋಜಿಸಲ್ಪಟ್ಟಿದ್ದಾರೆ. ಇವರನ್ನು ಅತ್ಯಂತ ಸುಂದರ ಪೊಲೀಸ್ ಅಧಿಕಾರಿ ಎಂದು ಕರೆಯಲಾಗುತ್ತದೆ. ಇವರದ್ದು ಪೊಲೀಸ್ ಇಲಾಖೆಯಲ್ಲಿ ಚಿರಪರಿಚಿತ ಹೆಸರು.
IPS ಸಚಿನ್ ಅತುಲ್ಕರ್ ಅವರು 2006 ರಲ್ಲಿ UPSC ಪರೀಕ್ಷೆಯಲ್ಲಿ 258 ನೇ ರ್ಯಾಂಕ್ ಗಳಿಸಿದ್ದರು. ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಹಾಜರಾಗುವ ಮೊದಲು ಬಿಕಾಂ ಪದವಿ ಪಡೆದಿದ್ದರು.ಇವರ ಫಿಟ್ ಬಾಡಿ ಮುಂದೆ ಬಾಲಿವುಡ್ ನ ದೊಡ್ಡ ತಾರೆಯರೂ ಸೋತಿದ್ದಾರೆ. ಅವರ ಈವರೆಗಿನ ವೃತ್ತಿಜೀವನದಲ್ಲಿ ಅವರು ಹೆಚ್ಚಿನ ಸಮಯ ಕ್ಷೇತ್ರ ಕರ್ತವ್ಯದಲ್ಲಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಐಪಿಎಸ್ ಸಚಿನ್ ಅತುಲ್ಕರ್ ಪ್ರತಿದಿನ 1-2 ಗಂಟೆಗಳ ಕಾಲ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾರೆ. ಮನಸ್ಸನ್ನು ಶಾಂತವಾಗಿಡಲು ಯೋಗ ಮತ್ತು ಧ್ಯಾನವನ್ನೂ ಮಾಡುತ್ತಾರೆ. ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.