ಬೆಂಗಳೂರು, ಜೂ. 29 (DaijiworldNews/AA): ನಮ್ಮ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರ ಕೊಟ್ಟು ಎಸ್ಐಆರ್ ಮಾಡಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ನಗರದಲ್ಲಿ ಸುದ್ದಿಗಾರರರೊಂದಿಗೆ ನಾಳೆಯಿಂದ ಎಸ್ಐಆರ್ ನಡೆಯಲಿರುವ ವಿಚಾರವಾಗಿ ಮಾತನಾಡಿದ ಅವರು, "ಈ ಬಗ್ಗೆ ನಾವು ಕ್ಯಾಬಿನೆಟ್ನಲ್ಲಿ ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಮುಖ್ಯ ಚುನಾವಣಾಧಿಕಾರಿಗೂ ಆಕ್ಷೇಪ ಸಲ್ಲಿಸಲಾಗಿದೆ. ಯಾವ ಆಧಾರದಲ್ಲಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡ್ತಾರೆ? ಇದರ ಹಿಂದಿನ ತರ್ಕ ಏನು ಅಂತ ಆಯೋಗಕ್ಕೆ ಕೇಳಿದ್ದೇವೆ" ಎಂದರು.
"ಗೊಂದಲ ಇದ್ದರೆ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲು ಅವಕಾಶ ಮಾಡಿಕೊಡಬೇಕು. ದಾಖಲೆಗಳಲ್ಲಿ ಸ್ಪೆಲ್ಲಿಂಗ್ ತಪ್ಪಾದ ಮಾತ್ರಕ್ಕೆ ಅವರ ಹಕ್ಕು ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಆಕ್ಷೇಪಕ್ಕೆ ಆಯೋಗದಿಂದ ಇನ್ನೂ ಉತ್ತರ ಸಿಕ್ಕಿಲ್ಲ. ನಾವು ಎಸ್ಐಆರ್ ಮಾಡಬೇಡಿ ಎಂದು ಹೇಳಿಲ್ಲ. ಉತ್ತಮವಾದ ವೋಟರ್ ಲಿಸ್ಟ್ ಕೊಡಲಿ. ಪಾರದರ್ಶಕವಾಗಿ ಮಾಡಲಿ" ಎಂದು ಹೇಳಿದರು.