ಜಾರ್ಖಂಡ್, ಜೂ. 29 (DaijiworldNews/AK): ಜಾರ್ಖಂಡ್ನ ರಾಂಚಿಯ ನಿವಾಸಿಯಾದ ಪ್ರೇರಣಾ ಸಿಂಗ್, UPSC ಪರೀಕ್ಷೆಯಲ್ಲಿ ಸತತ ಮೂರು ಬಾರಿ ವಿಫಲರಾದರು. ಆದರೆ ನಾಲ್ಕನೇ ಪ್ರಯತ್ನದಲ್ಲಿ 271 ನೇ ರ್ಯಾಂಕ್ ಪಡೆದು IRS ಕಸ್ಟಮ್ಸ್ನಲ್ಲಿ ಆಯ್ಕೆಯಾದರು. ಅವರ ಸ್ಪೂರ್ತಿದಾಯಕ ಸ್ಟೋರಿ ಇಲ್ಲಿದೆ.

ಪ್ರೇರಣಾ ಸಿಂಗ್ ಅವರ ತಂದೆ ಕೇವಲ 13 ವರ್ಷದವಳಿದ್ದಾಗ ನಿಧನರಾದರು. ಕುಟುಂಬವನ್ನು ಆರ್ಥಿಕವಾಗಿ ಪೋಷಿಸಲು, ಅವರ ತಾಯಿ ಜಾರ್ಖಂಡ್ ಸರ್ಕಾರದ ಪಶುವೈದ್ಯಕೀಯ ಇಲಾಖೆಯಲ್ಲಿ ಗುಮಾಸ್ತರಾಗಿ ಕೆಲಸ ಪಡೆದರು. ಸವಾಲಿನ ಸಂದರ್ಭಗಳಲ್ಲೂ ತಮ್ಮ ಮಗಳ ಶಿಕ್ಷಣದ ಮೇಲೆ ಕೇಂದ್ರೀಕರಿಸಿದರು.
ರಾಂಚಿಯಲ್ಲಿ ಶಾಲಾ ಶಿಕ್ಷಣ ಮುಗಿಸಿದ ನಂತರ, ಪ್ರೇರಣಾ ದೆಹಲಿಯ ಮಿರಾಂಡಾ ಹೌಸ್ನಿಂದ ಸಮಾಜಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ನಂತರ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ವೇದಾಂತ ಬಾಲ್ಕೊದಲ್ಲಿ ಮಾನವ ಸಂಪನ್ಮೂಲ ವೃತ್ತಿಪರರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಆಡಳಿತ ಅಧಿಕಾರಿಯಾಗುವುದರಿಂದ ಗಮನಾರ್ಹ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ಅವರ ತಂದೆಯ ನಂಬಿಕೆಯಿಂದ ಪ್ರೇರಿತರಾಗಿ, ಅವರು 2020 ರಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಲು ತಮ್ಮ ಕೆಲಸವನ್ನು ತೊರೆದರು.
2020 ರಲ್ಲಿ ತನ್ನ ಆರಂಭಿಕ ಪ್ರಯತ್ನದಲ್ಲಿ, ಅವಳು UPSC ಪ್ರಿಲಿಮ್ಸ್ ಅನ್ನು ಕೇವಲ 2 ಅಂಕಗಳಿಂದ ಅನುಉತ್ತೀರ್ಣರಾದರು. 2021 ರಲ್ಲಿ, ಅವಳರು 15 ಅಂಕಗಳಿಂದ ವಿಫಲರಾದರು ಮತ್ತು 2022 ರಲ್ಲೂ ಪ್ರಯತ್ನ ವಿಫಲವಾಯಿತು. ಈ ಮೂರು ಸತತ ವೈಫಲ್ಯಗಳ ನಂತರ 2023 ರಲ್ಲಿ, ಪ್ರೇರಣಾ ಸಿಂಗ್ UPSC ಪ್ರಿಲಿಮ್ಸ್ನಲ್ಲಿ ಉತ್ತೀರ್ಣರಾದರು.
ಈ ಅವಧಿಯಲ್ಲಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಸಾರ್ವಜನಿಕ ನೀತಿಯಲ್ಲಿ ಪದವಿ ಪಡೆಯಲು ಅವರಿಗೆ ಆಫರ್ ಬಂದಿತು. ಈ ಅವಕಾಶದ ಹೊರತಾಗಿಯೂ, ಅವರು ತಮ್ಮ UPSC ಮುಖ್ಯ ಪರೀಕ್ಷೆಯ ತಯಾರಿಯ ಮೇಲೆ ಸಂಪೂರ್ಣವಾಗಿ ಗಮನಹರಿಸಿದರು. ಅಂತಿಮವಾಗಿ 271 ನೇ ರ್ಯಾಂಕ್ ಗಳಿಸಿ ಅಧಿಕಾರಿಯಾದರು.