ನವದೆಹಲಿ,ಜೂ. 11 (DaijiworldNews/AK): ಹಾರ್ಮುಜ್ ಜಲಸಂಧಿಯ ಬಳಿ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿದ್ದು, ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ.

ಒಮಾನ್ ಕರಾವಳಿಯಲ್ಲಿ ನಿನ್ನೆ 24 ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ದಾಳಿ ನಡೆದಿತ್ತು. ಇದರಲ್ಲಿ 21 ನಾವಿಕರನ್ನು ರಕ್ಷಣೆ ಮಾಡಿದ್ದರು. ಮೂವರು ನಾಪತ್ತೆಯಾಗಿದ್ದರು. ಈ ಮೂವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಮಾಹಿತಿ ನೀಡಿದ್ದಾರೆ.
ಟ್ಯಾಂಕರ್ ಇರಾನ್ನಿಂದ ತೈಲವನ್ನು ಸಾಗಿಸುತ್ತಿತ್ತು. ಸೂಚನೆಗಳನ್ನು ಪಾಲಿಸದ ಕಾರಣ ನಮ್ಮ ಸೇನೆಯು ಹಡಗಿನ ಮೇಲೆ ನಿಖರವಾದ ದಾಳಿ ನಡೆಸಿತು ಎಂದು ಅಮೆರಿಕ ತಿಳಿಸಿದೆ.
ಅಮೆರಿಕದ ದಾಳಿಗೆ ಭಾರತ ಖಂಡನೆ ವ್ಯಕ್ತಪಡಿಸಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ (MEA) ಹೆಚ್ಚುವರಿ ಕಾರ್ಯದರ್ಶಿ (ಅಮೆರಿಕ) ನಾಗರಾಜ್ ನಾಯ್ಡು, ಅಮೆರಿಕದ ಪ್ರಭಾರ ಅಧಿಕಾರಿ ಜೇಸನ್ ಮೀಕ್ಸ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.