ಬೆಂಗಳೂರು, ಜೂ. 11 (DaijiworldNews/TA): ಆಭರಣ ಚಿನ್ನದ ಬೆಲೆಯಲ್ಲಿ ಸತತ ಎರಡನೇ ದಿನವೂ ಇಳಿಕೆ ಕಂಡುಬಂದಿದೆ. ಬುಧವಾರ 10 ಗ್ರಾಂ ಚಿನ್ನದ ದರದಲ್ಲಿ ರೂ.395 ಕುಸಿತ ದಾಖಲಾಗಿದ್ದರೆ, ಗುರುವಾರ ಮತ್ತಷ್ಟು ರೂ.195 ಇಳಿಕೆಯಾಗಿದ್ದು, ಎರಡು ದಿನಗಳಲ್ಲಿ ಒಟ್ಟು ಸುಮಾರು ರೂ.600ರಷ್ಟು ಕಡಿಮೆಯಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ರೂ. 1,33,500 ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ರೂ. 1,45,640ಕ್ಕೆ ತಲುಪಿದೆ. ಇತ್ತ, ಕಳೆದ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಬೆಳ್ಳಿ ದರ ಗುರುವಾರ ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿದೆ.
ಭಾರತದಲ್ಲಿ ಪ್ರಸ್ತುತ 24 ಕ್ಯಾರಟ್ ಚಿನ್ನದ ಪ್ರತಿ ಗ್ರಾಂ ದರ ರೂ. 14,564, 22 ಕ್ಯಾರಟ್ ಚಿನ್ನದ ಪ್ರತಿ ಗ್ರಾಂ ದರ ರೂ.13,350 ಹಾಗೂ 18 ಕ್ಯಾರಟ್ ಚಿನ್ನದ ಪ್ರತಿ ಗ್ರಾಂ ದರ ರೂ. 10,923 ಇದೆ. ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ರೂ. 250ರಷ್ಟಿದೆ.
ಬೆಂಗಳೂರಿನಲ್ಲಿ ಕೂಡ ಇದೇ ದರ ಮುಂದುವರಿದಿದ್ದು, 22 ಕ್ಯಾರಟ್ ಚಿನ್ನದ ಪ್ರತಿ ಗ್ರಾಂ ರೂ. 13,350, 24 ಕ್ಯಾರಟ್ ಚಿನ್ನದ ಪ್ರತಿ ಗ್ರಾಂ ರೂ. 14,564 ಹಾಗೂ ಬೆಳ್ಳಿ ಪ್ರತಿ ಗ್ರಾಂ ರೂ. 250 ದರದಲ್ಲಿ ಮಾರಾಟವಾಗುತ್ತಿದೆ.
ದೇಶದ ಪ್ರಮುಖ ನಗರಗಳ ಪೈಕಿ ಚೆನ್ನೈನಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ರೂ. 13,500 ಇದ್ದು, ದೆಹಲಿ ಮತ್ತು ಜೈಪುರದಲ್ಲಿ ರೂ. 13,365, ಮುಂಬೈ, ಕೋಲ್ಕತಾ, ಕೇರಳ ಹಾಗೂ ಭುವನೇಶ್ವರದಲ್ಲಿ ರೂ. 13,350 ದರ ದಾಖಲಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ದುಬೈನಲ್ಲಿ 24 ಕ್ಯಾರಟ್ ಚಿನ್ನದ ಪ್ರತಿ ಗ್ರಾಂ ಬೆಲೆ ರೂ. 12,917 ಇದ್ದರೆ, ಅಮೆರಿಕದಲ್ಲಿ ರೂ. 13,010, ಸಿಂಗಾಪುರದಲ್ಲಿ ರೂ. 13,362 ಹಾಗೂ ಕುವೇತ್ನಲ್ಲಿ ರೂ.13,558ಕ್ಕೆ ವಹಿವಾಟಾಗುತ್ತಿದೆ.
ಇನ್ನು ಬೆಳ್ಳಿ ಬೆಲೆ ದೇಶದ ಬಹುತೇಕ ನಗರಗಳಲ್ಲಿ ಪ್ರತಿ ಗ್ರಾಂಗೆ ರೂ. 250ರಷ್ಟಿದ್ದು, ಚೆನ್ನೈ, ಕೇರಳ ಮತ್ತು ಭುವನೇಶ್ವರದಲ್ಲಿ ರೂ. 260 ದರದಲ್ಲಿ ಮಾರಾಟವಾಗುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಕಂಡುಬಂದಿರುವ ಇಳಿಕೆ ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ್ದು, ಮುಂದಿನ ದಿನಗಳಲ್ಲಿ ದರಗಳ ಏರಿಳಿತದ ಮೇಲೆ ಹೂಡಿಕೆದಾರರು ಮತ್ತು ಖರೀದಿದಾರರು ಗಮನ ಹರಿಸಬೇಕಾಗಿದೆ.