ನವದೆಹಲಿ, ಜೂ. 10 (DaijiworldNews/AK): ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ನಡುವಿನ ಬಂಡಾಯದಿಂದ ಮಮತಾ ಬ್ಯಾನರ್ಜಿ ಪಕ್ಷವನ್ನು ಉಳಿಸಿಕೊಳ್ಳುವುದು ಹೇಗೆಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರ ಕೈ ತಪ್ಪಿದ ಬಳಿಕ ಇದೀಗ ಪಕ್ಷವೂ ಕೈ ತಪ್ಪಿಹೋಗುತ್ತದೆಯೇ? ಎಂಬ ಆತಂಕದಲ್ಲಿ ದೀದಿ ಇದ್ದಾರೆ.

ಇದರ ನಡುವೆ ದೆಹಲಿಯಲ್ಲಿ ಕೈ ನಾಯಕರ ಜೊತೆ ಟಿಎಂಸಿ ನಾಯಕರ ಚರ್ಚೆ ನಡೆದಿದ್ದು, ನಿನ್ನೆ ಸೋನಿಯಾ ಗಾಂಧಿಯನ್ನು ಮಮತಾ ಬ್ಯಾನರ್ಜಿ ಭೇಟಿಯಾಗಿದ್ದರು. ಇಂದು ರಾಹುಲ್ ಗಾಂಧಿಯನ್ನು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಭೇಟಿಯಾಗಿದ್ದಾರೆ. ಈ ವೇಳೆ ಮಮತಾ ಬ್ಯಾನರ್ಜಿಗೆ ಎಐಸಿಸಿ ಉಪಾಧ್ಯಕ್ಷರ ಸ್ಥಾನದ ಆಫರ್ ನೀಡಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ದೀದಿ ಒಪ್ಪಿದರೆ ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನವಾಗಲಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ತೀವ್ರ ಆಂತರಿಕ ಬಂಡಾಯ ಮತ್ತು ಸರಣಿ ರಾಜೀನಾಮೆಗಳ ಬೆನ್ನಲ್ಲೇ ದೇಶದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಬಲ್ಲ ಅತ್ಯಂತ ಮಹತ್ವದ ಬೆಳವಣಿಗೆಯೊಂದು ವರದಿಯಾಗಿದೆ. ಕಾಂಗ್ರೆಸ್ನ ಉನ್ನತ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ನಡೆದ ರಹಸ್ಯ ಮಾತುಕತೆಯ ನಂತರ, ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅತ್ಯುನ್ನತ ಹುದ್ದೆಗಳನ್ನು ಆಫರ್ ಮಾಡಲಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.