ಬೆಂಗಳೂರು, ಜೂ. 09 (DaijiworldNews/AA): ಗೃಹಲಕ್ಷ್ಮಿ ಹಣದ ದುರುಪಯೋಗ ತಡೆಗಟ್ಟಲು ಬಯೋಮೆಟ್ರಿಕ್ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದ್ದು, ಮುಂದಿನ ತಿಂಗಳಿನಿಂದ ಬಯೋಮೆಟ್ರಿಕ್ ಜಾರಿ ಆಗಲಿದೆ.

ಬಯೋಮೆಟ್ರಿಕ್ಗೆ ಗೃಹಲಕ್ಷ್ಮಿ ಫಲಾನುಭವಿಗಳು ಶುಲ್ಕವನ್ನ ಪಾವತಿ ಮಾಡಬೇಕಿದೆ. ಬಯೋಮೆಟ್ರಿಕ್ ಆಗದೇ ಇದ್ದರೆ 2,000 ರೂ. ಬರುವುದಿಲ್ಲ. ಹೀಗಾಗಿ ಬಯೋಮೆಟ್ರಿಕ್ ಮಾಡಿಸಿಕೊಳ್ಳಲು ಪ್ರತಿ ಫಲಾನುಭವಿ 5 ರೂ. ಶುಲ್ಕವನ್ನ ಪಾವತಿಸಬೇಕಾಗಿದೆ.
ಬಯೋಮೆಟ್ರಿಕ್ ಜೊತೆಗೆ ಗೃಹಲಕ್ಷ್ಮಿ ಸೊಸೈಟಿಗೆ ಸದಸ್ಯತ್ವವನ್ನ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಿಕೊಳ್ತಿದೆ. ಸದಸ್ಯತ್ವ ಬಯಸುವ ಫಲಾನುಭವಿಗಳು 1,250 ರೂ. ಪಾವತಿ ಮಾಡಬೇಕಿದೆ. ಒಂದು ವೇಳೆ ಗೃಹಲಕ್ಷ್ಮಿ ಸೊಸೈಟಿ ಸದಸ್ಯತ್ವ ಬೇಡ ಅಂದರೆ ಬಯೋಮೆಟ್ರಿಕ್ ಅಷ್ಟೇ ಮಾಡಿಸಿಕೊಳ್ಳಬಹುದು. ಮುಂದಿನ ತಿಂಗಳ ಒಳಗಡೆ ಬಯೋಮೆಟ್ರಿಕ್ ಜಾರಿ ಮಾಡುವ ಚಿಂತನೆಯಲ್ಲಿದ್ದು, ಈಗಾಗಲೇ ಗೃಹಲಕ್ಷ್ಮಿ ಬಯೋಮೆಟ್ರಿಕ್ಗಾಗಿ ಆಪ್ ತಯಾರಿಸಲಾಗುತ್ತಿದೆ.