ಕೋಲ್ಕತ್ತಾ, ಜೂ. 08 (DaijiworldNews/AA): ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸುಖೇಂದು ಶೇಖರ್ ರಾಯ್ ಹಾಗೂ ಕೋಯೆಲ್ ಮಲ್ಲಿಕ್ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರಸ್ತುತ ರಾಜ್ಯಸಭೆಯಲ್ಲಿ ಟಿಎಂಸಿ 13 ಸಂಸದರನ್ನು ಹೊಂದಿದೆ. ಇದೀಗ ಇವರಿಬ್ಬರ ಅಧಿಕೃತವಾಗಿ ರಾಜೀನಾಮೆಯಿಂದ ಪಕ್ಷದ ಸಂಖ್ಯಾಬಲ 11 ಕ್ಕೆ ಕುಸಿದಿದೆ.
ರಾಜೀನಾಮೆ ನೀಡಿರುವ ಸಂಸದ ಸುಖೇಂದು ಶೇಖರ್ ರಾಯ್ ಅವರ ಅಧಿಕಾರಾವಧಿ 2029 ರ ಆಗಸ್ಟ್ವರೆಗೆ ಇತ್ತು. ಇನ್ನು ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ಕೋಯಲ್ ಮಲ್ಲಿಕ್ ಅವರ ಅವಧಿ 2032 ರ ಏಪ್ರಿಲ್ವರೆಗೆ ಇತ್ತು. ಇವರಿಬ್ಬರ ಈ ದಿಢೀರ್ ನಡೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.