ಕೋಲ್ಕತ್ತಾ, ಜೂ. 08 (DaijiworldNews/AA): 7 ಪ್ರಕರಣಗಳ ವಾಂಟೆಡ್ ಆರೋಪಿ, ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ ನಾಯಕ ಜಹಾಂಗೀರ್ ಖಾನ್ ಅವರನ್ನ ಇಂದು ಮುಂಜಾನೆ ರಾಜ್ಯ ಪೊಲೀಸ್ ವಿಶೇಷ ಕಾರ್ಯಪಡೆ ನೇಪಾಳದ ಗಡಿಯಲ್ಲಿ ಬಂಧಿಸಿದೆ.

ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ಆತನನ್ನ ನೇಪಾಳ ಗಡಿಯಲ್ಲಿ ಎಸ್ಟಿಎಫ್ ತಂಡ ಬಂಧಿಸಿದೆ. ಪಶ್ಚಿಮ ಬಂಗಾಳದ ದಕ್ಷಿಣ-24 ಪರಗಣ ಜಿಲ್ಲೆಯ ಫಾಲ್ಟಾ ಪೊಲೀಸ್ ಠಾಣೆಯಲ್ಲಿ ಖಾನ್ ವಿರುದ್ಧ 7 ಎಫ್ಐಆರ್ಗಳು ದಾಖಲಾಗಿವೆ. ಪೊಲೀಸರ ತೀವ್ರ ಕಾರ್ಯಾಚರಣೆಯ ಹೊರತಾಗಿಯೂ ಆತ ತಲೆ ಮರೆಸಿಕೊಂಡು ತಿರುಗುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುಪ್ತಚರ ಮಾಹಿತಿಗಳ ಆಧಾರದ ಮೇಲೆ ಖಾನ್ ಚಲನವಲನಗಳ ಬಗ್ಗೆ ತೀವ್ರ ನಿಗಾ ಇಟ್ಟಿದ್ದ ಎಸ್ಟಿಎಫ್, ಇಂದು ಮುಂಜಾನೆ ನೇಪಾಳ ಗಡಿಯಲ್ಲಿ ಬಂಧಿಸಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.