ವಿಜಯಪುರ, ಜೂ. 07 (DaijiworldNews/AA): ಮೋದಿ ಸರ್ಕಾರ ಜನರ ಮೇಲೆ ಕಾಳಜಿ ಇಲ್ಲದೆ, ಜನರು ಹಾಳಾಗಿ ಹೋಗ್ಲಿ ಅಂತಾ ಬೆಲೆ ಜಾಸ್ತಿ ಮಾಡಿದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ಯಾಸ್ ಬೆಲೆ ಏರಿಕೆ ವಿಚಾರವಾಗಿ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರು ಯಾವಾಗಲೂ ಜನವಿರೋಧಿ ನೀತಿಯನ್ನ ಅನುಸರಿಸಿಕೊಂಡು ಬಂದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದಾಗಲೂ ಕೂಡ ಜನರಿಗೆ ಲಾಭ ಆಗುವ ಹಾಗೆ ಮಾಡಲಿಲ್ಲ" ಎಂದರು.
"ಕಚ್ಚಾತೈಲ ಬೆಲೆ ಕಡಿಮೆ ಇದ್ದಾಗಲೂ ಕೂಡ ಪೆಟ್ರೋಲ್, ಡಿಸೇಲ್ ಬೆಲೆ ಜಾಸ್ತಿ ಮಾಡಿದ್ದರು. ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಜಾಸ್ತಿ ಆಗಿದೆ. ಈಗ ಬೆಲೆ ಜಾಸ್ತಿ ಮಾಡಿದ್ದಾರೆ. ಕಚ್ಚಾತೈಲ ಬೆಲೆ ಕಡಿಮೆ ಇದ್ದಾಗ ಜನರಿಗೆ ಬೆಲೆ ಕಡಿಮೆ ಮಾಡಿದ್ರೆ ಜನರಿಗೆ ಹೊರೆ ಆಗುತ್ತಿರಲಿಲ್ಲ. ಇದು ಜನರಿಗೆ ಹೊರೆ ಆಗುತ್ತೆ, ಇದರಿಂದ ಆರ್ಥಿಕ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತದೆ" ಎಂದು ಕಿಡಿಕಾರಿದರು.