ನವದೆಹಲಿ, ಜೂ. 04 (DaijiworldNews/AA): ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಪ್ಯಾಕೆಟ್ಗಳ ಗಾತ್ರವನ್ನು ಪ್ರಮಾಣೀಕರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ 850 ಎಂಎಲ್, 875 ಎಂಎಲ್, 900 ಎಂಎಲ್, ಹಾಗೂ 950ಎಂಎಲ್ನ ವಿವಿಧ ಗಾತ್ರದ ಅಡುಗೆ ಎಣ್ಣೆ ಪ್ಯಾಕ್ಗಳು ಸಿಗುತ್ತಿವೆ. ಹೀಗಾಗಿ ಗ್ರಾಹಕರಿಗೆ ಒಂದು ಲೀಟರ್ಗೆ ಯಾವ ಬ್ರ್ಯಾಂಡ್ನ ಎಣ್ಣೆ ಎಷ್ಟು ಬೆಲೆ ಎಂದು ಲೆಕ್ಕ ಹಾಕಲು ಕಷ್ಟವಾಗುತ್ತಿದೆ. ಹೀಗಾಗಿ ಎಲ್ಲಾ ಬ್ರ್ಯಾಂಡ್ಗಳೂ ಒಂದೇ ನಿಗದಿತ ಗಾತ್ರದಲ್ಲಿ ಅಡುಗೆ ಎಣ್ಣೆ ಮಾರಾಟ ಮಾಡಿದರೆ, ಗ್ರಾಹಕರು ಸುಲಭವಾಗಿ ಬೆಲೆಗಳನ್ನು ಹೋಲಿಸಿ ಖರೀದಿಸಲು ಸಹಕಾರಿಯಾಗುತ್ತದೆ.
ಪ್ಯಾಕಿಂಗ್ ಗಾತ್ರವನ್ನು ದೇಶಾದ್ಯಂತ ಒಂದೇ ಸಮನಾಗಿ ಪ್ರಮಾಣೀಕರಿಸಬೇಕು ಎಂಬ ಬೇಡಿಕೆ ಉದ್ಯಮ ವಲಯದಲ್ಲಿ ತೀವ್ರಗೊಂಡಿದೆ. ಗ್ರಾಹಕರ ಹಿತರಕ್ಷಣೆ, ಪಾರದರ್ಶಕ ಲೇಬಲಿಂಗ್ ಮತ್ತು ಪರಿಸರಸ್ನೇಹಿ ಪ್ಯಾಕೇಜಿಂಗ್ಗೆ ಸರ್ಕಾರ ಆದ್ಯತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ನಿಯಮ ಜಾರಿಗೆ ತರಲು ಮುಂದಾಗಿದೆ. ಶೀಘ್ರದಲ್ಲೇ ಈ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.