ಉತ್ತರಪ್ರದೇಶ,ಜೂ. 04 (DaijiworldNews/AK): ಅಮೆರಿಕದಲ್ಲಿನ ಉದ್ಯೋಗ ಬಿಟ್ಟು ಬಂದು ಪೊಲೀಸ್ ಅಧಿಕಾರಿಯಾದ ಆಕಾಶ್ ಇವರ ವೃತ್ತಿಜೀವನದ ಹಾದಿಯ ಬಗ್ಗೆ ತಿಳಿಯೋಣ.

ಆಕಾಶ್ ಹುಟ್ಟಿದ್ದು ಯುಪಿಯ ಬುಲಂದ್ ಶಹರ್ ನಲ್ಲಿ. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಕಾನ್ಪುರದ ವೀರೇಂದ್ರ ಸ್ವರೂಪ್ ಶಾಲೆಯಲ್ಲಿ ಮಾಡಿದರು.
ಇದರ ನಂತರ ಅವರು ಜೆಇಇ ಪರೀಕ್ಷೆಯನ್ನು ತೆಗೆದುಕೊಂಡು, ಐಐಟಿ ರೂರ್ಕಿಯಲ್ಲಿ ಪ್ರವೇಶ ಪಡೆದಿದ್ದರು. ಆದರೆ ಅವರು ಐಐಐಟಿ ಅಲಹಾಬಾದ್ ನಿಂದ ಬಿ.ಟೆಕ್ ಮಾಡಲು ನಿರ್ಧರಿಸಿದರು. ಇಂಜಿನಿಯರಿಂಗ್ ನಂತರ ಅಮೆರಿಕದ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತು. ಆದರೆ ಆಕಾಶ್ ಗೆ ಅಮೆರಿಕದ ಕೆಲಸ ಇಷ್ಟವಾಗಲಿಲ್ಲ. ಆಗಲೇ ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದರು. 6 ತಿಂಗಳಲ್ಲಿ ಕೆಲಸ ಬಿಟ್ಟು UPSC ಗೆ ತಯಾರಿ ಆರಂಭಿಸಿದರು. 2012ರಲ್ಲಿ 138ನೇ ರ್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾದರು.
ಆಕಾಶ್ 2021 ರಲ್ಲಿ ಹರಿಯಾಣದ ನಿವಾಸಿ ಡಾ.ಬಬಿತಾ ಅವರನ್ನು ವಿವಾಹವಾದರು. ಅವರ ಪತ್ನಿ ದೆಹಲಿಯ ಕಲಾವತಿ ಆಸ್ಪತ್ರೆಯಲ್ಲಿ ವೈದ್ಯೆ ಆಗಿದ್ದಾರೆ.