ನವದೆಹಲಿ, ಜೂ. 02 (DaijiworldNews/AK): ಅಮೆರಿಕ-ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ ಆರ್ಬಿಐ ತನ್ನ ಬಳಿ ಇಟ್ಟಿರುವ 12 ಬಿಲಿಯನ್ ಡಾಲರ್ ಮೌಲ್ಯದ ಚಿನ್ನದ ದಾಸ್ತಾನು ಮಾರಾಟಕ್ಕೆ ಮುಂದಾಗಿದೆ. ಈ ಮೂಲಕ, ವಿದೇಶಿ ವಿನಿಮಯ ರಕ್ಷಣೆ ಹಾಗೂ ಆರ್ಥಿಕ ಹಿಂಜರಿತ ತಡೆಗೆ ಸಜ್ಜಾಗುತ್ತಿದೆ ಎಂದು ತಿಳಿದು ಬಂದಿದೆ.

ಭಾರತವು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಜಗತ್ತಿನೇ 3ನೇ ಅತಿದೊಡ್ಡ ದೇಶವಾಗಿದೆ. ಇದರಿಂದಾಗಿ, ವಿದೇಶಿ ವಿನಿಮಯ ಸಂಗ್ರಹ ಕುಸಿತ ಕಾಣುತ್ತಿದೆ. ಅಲ್ಲದೇ, ರೂಪಾಯಿ ಮೌಲ್ಯವೂ ಕೂಡ ದುರ್ಬಲಗೊಳ್ಳುತ್ತಿದೆ. ಹೀಗಾಗಿ, ವಿದೇಶಿ ವಿನಿಮಯ ಹೊರ ಹೋಗದಂತೆ ಹಾಗೂ ಆರ್ಥಿಕ ಸ್ಥಿರತೆ ಕಾಪಾಡಲು ಈ ಕ್ರಮ ತೆಗೆದುಕೊಳ್ಳುತ್ತಿದೆ.
ಇದಕ್ಕಾಗಿ ಇಂಧನ ದರ ಏರಿಕೆ ಹಾಗೂ ಅಮೂಲ್ಯವಾದ ಲೋಹಗಳ ಮೇಲಿನ ಆಮದು ಸುಂಕ ಏರಿಕೆ ಇವು ಪ್ರಮುಖವಾದ ಕ್ರಮಗಳಾಗಿವೆ. ಮೇ 22ರವರೆಗೆ 12 ಬಿಲಿಯನ್ ಡಾಲರ್ ಮೌಲ್ಯದ ಬಂಗಾರ ಮಾರಾಟ ಮಾಡಿದ್ದು, 7.5 ಬಿಲಿಯನ್ ವಿದೇಶಿ ಕರೆನ್ಸಿಯನ್ನು ಸಂಗ್ರಹಿಸಿಟ್ಟಿದೆ ಅಂತ ವರದಿಗಳು ಹೇಳಿವೆ.