ನವದೆಹಲಿ, ಮೇ. 30 (DaijiworldNews/AA): ಆಪರೇಷನ್ ಸಿಂಧೂರ್ 2.0ಗೆ ಭಾರತವು ಸಿದ್ಧತೆ ನಡೆಸ್ತಿದೆ ಅಂತ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.

"ಆಪರೇಷನ್ ಸಿಂಧೂರ್-1 ತಾತ್ಕಾಲಿಕ ಕದನ ವಿರಾಮವಾಗಿತ್ತು. ಶತ್ರು ರಾಷ್ಟ್ರಗಳಿಂದ, ಶಾಂತಿ ನೆಲೆಸಲು ಸೂಕ್ತವಾದ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಮೂರೂ ಸೇನೆಗಳು ಯುದ್ಧಕ್ಕೆ ಸಿದ್ಧವಾಗ್ತಿವೆ" ಎಂದು ಪಾಕ್ ಹೆಸರನ್ನು ಉಲ್ಲೇಖಿಸದೇ ಎಂದರು.
ಕಾಶ್ಮೀರದ ಪಹಲ್ಗಾಂನಲ್ಲಿ ಅಮಾಯಕ ಪ್ರವಾಸಿಗರ ಮೇಲೆ, ಪಾಕಿಸ್ತಾನ ಆಶ್ರಿತ ಉಗ್ರರು ದಾಳಿಯನ್ನು ನಡೆಸಿದ್ದರು. ಇದಕ್ಕೆ, ಪ್ರತಿಯಾಗಿ ಭಾರತದ ಮಿಲಿಟರಿ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ನಡೆಸಿತ್ತು. ಅದು, ಮುಂದುವರಿಯಲಿದೆ. ಒಂದು ವೇಳೆ, ಆಪರೇಷನ್ ಸಿಂಧೂರ್ 2.0 ಅವಶ್ಯಕತೆ ಬಿದ್ದಲ್ಲಿ, ಮೂರೂ ಸಶಸ್ತ್ರ ಪಡೆಗಳು, ಉತ್ತಮ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ನಮ್ಮ ಮುಂದಿನ ಯುದ್ಧ ತಂತ್ರಗಳಿಗೆ, ನಮ್ಮನ್ನು ನಾವು 24 ಗಂಟೆಯೂ ಭೂಸೇನೆ ಮಾತ್ರವಲ್ಲದೇ, ವಾಯುಸೇನೆ ಮತ್ತು ನೌಕಾಪಡೆಗಳನ್ನೂ ಸಜ್ಜುಗೊಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.