ಬೆಂಗಳೂರು, ಮೇ. 30 (DaijiworldNews/AA): ಸಿದ್ದರಾಮಯ್ಯನವರೇ ನಾವು ನಿಮಗೆ ವಿಶ್ರಾಂತಿ ನೀಡೋದಿಲ್ಲ. ನಿಮ್ಮ ಸೇವೆ ಕರ್ನಾಟಕದ ಜೊತೆ ರಾಷ್ಟ್ರೀಯ ಮಟ್ಟದಲ್ಲೂ ನಿಮ್ಮ ಅಗತ್ಯತೆ ಇದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರನ್ನ ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿದ್ದಾರೆ.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ರಾಜ್ಯಕ್ಕೆ ಭಾವುಕ ದಿನ. ಸಿದ್ದರಾಮಯ್ಯ ಅವರು ನಮಗೆಲ್ಲರಿಗಾಗಿ ನಿಂತು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರೇ ನಾವು ನಿಮಗೆ ವಿಶ್ರಾಂತಿ ನೀಡೋದಿಲ್ಲ. ನಿಮ್ಮ ಸೇವೆ ಕರ್ನಾಟಕದ ಜೊತೆ ರಾಷ್ಟ್ರೀಯ ಮಟ್ಟದಲ್ಲೂ ನಿಮ್ಮ ಅಗತ್ಯತೆವಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯನ್ನು ಸಿದ್ದರಾಮಯ್ಯನವರು ದಾರಿ ಸುಗಮಗೊಳಿಸಿದ್ದಾರೆ. ಬಿಜೆಪಿಯು ಈ ಪ್ರಕ್ರಿಯೆ ಸುಲಭವಲ್ಲ ಎಂದು ಭಾವಿಸಿತ್ತು. ಆದರೆ ಕಾಂಗ್ರೆಸ್ನ ಒಗ್ಗಟ್ಟಿನಿಂದ ಬಿಜೆಪಿಯ ನಿರೀಕ್ಷೆಗೆ ತಣ್ಣೀರು ಎರಚಲಾಯಿತು ಎಂದು ಅವರು ವಾಗ್ದಾಳಿ ನಡೆಸಿದರು.