ಕೋಲ್ಕತ್ತಾ, ಮೇ. 26 (DaijiworldNews/AA): ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೋಲು ತಮ್ಮ ಮಗಳ ಸಾವಿಗೆ ಸಿಕ್ಕ ನ್ಯಾಯದ ಮೊದಲ ಹೆಜ್ಜೆ ಎಂದು ಆರ್ಜಿ ಕರ್ ಸಂತ್ರಸ್ತೆ ವೈದ್ಯೆಯ ತಾಯಿ ರತ್ನಾ ದೇಬ್ನಾಥ್ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ಅವರು, "ಪ್ರಾಮಾಣಿಕತೆಯ ಶಕ್ತಿ ಅಪಾರವಾಗಿದೆ. ಅನ್ಯಾಯದ ವಿರುದ್ಧ ತಾಳ್ಮೆಯಿಂದ ಹೋರಾಡುವುದು ಮಾತ್ರ ನಮಗೆ ಅಗತ್ಯವಾಗಿತ್ತು" ಎಂದು ತಿಳಿಸಿದ್ದಾರೆ.
ಇನ್ನು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ಇಂದು ಶಾಸಕಿಯಾಗಿರಬಹುದು, ಆದರೆ ನನ್ನ ಜೀವನದ ಎಲ್ಲಾ ಸಂತೋಷಗಳು ಮಗಳೊಂದಿಗೆ ಹೋಗಿವೆ. ನನ್ನ ಏಕೈಕ ಉದ್ದೇಶ ನನ್ನ ಮಗಳಿಗೆ ನ್ಯಾಯ ಸಿಗುವುದಾಗಿದೆ. ಈ ಹಿಂದೆ ತನಿಖಾಧಿಕಾರಿಗಳಿಗೆ ನೀಡಿದ್ದ ಪ್ರಮುಖ ಶಂಕಿತರ ಹೆಸರುಗಳ ಪಟ್ಟಿಯನ್ನು ಈಗ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೂ ಸಲ್ಲಿಸಿದ್ದೇನೆ" ಎಂದು ಹೇಳಿದ್ದಾರೆ.