ಬೆಂಗಳೂರು, ಮೇ. 23 (DaijiworldNews/AA): ಎಲ್ಲಾ ಹೊರೆಯನ್ನು ಜನರ ಮೇಲೆ ಹಾಕುತ್ತಿದ್ದರೆ ಮೋದಿ ಯಾವಾಗ ಜವಾಬ್ದಾರಿ ತೆಗೆದುಕೊಳ್ತಾರೆ ಎಂದು ಕೇಂದ್ರ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಲೆ ಏರಿಕೆಗೆ ಉತ್ತರ ನೀಡಬೇಕಾದವರು ಕೇಂದ್ರ ಸರ್ಕಾರ. ಉಳಿದ ಎಲ್ಲ ಕಡೆ ಬಿಜೆಪಿ ನಾಯಕರು ಮಾತನಾಡ್ತಾರೆ ಇದಕ್ಕೆ ಯಾಕೆ ಯಾರು ಮಾತನಾಡುತ್ತಿಲ್ಲ? ಮೊನ್ನೆ ಯಾವುದೇ ರೀತಿ ತೊಂದರೆ ಆಗಿಲ್ಲ ಅಂದ್ರು ರಷ್ಯಾದಿಂದ ಬಹಳ ಕಡಿಮೆ ಬೆಲೆಯಲ್ಲಿ ತೈಲ ತಗೊಂಡ್ವಿ ಅಂದ್ರು, ಮೋದಿ ಅವರು ಇರೋ ಬರೋ ದೇಶವೆಲ್ಲ ಸುತ್ತಿದ್ದಾರೆ. ಹಾಗಾದರೆ ದೇಶಕ್ಕೆ ಒಳ್ಳೆದಾಗಿದೆ ಅಂತಾ ಯಾಕೆ ಹೇಳಿದ್ರು? ಇದಕ್ಕೆಲ್ಲಾ ಯಾರು ಕಾರಣ?" ಎಂದು ಕೇಳಿದರು.
"ವಾರಕ್ಕೆ ಮೂರು ಮೂರು ಬಾರಿ ಬೆಲೆ ಏರಿಕೆ ಮಾಡ್ತಾರೆ. ಯಾವ ರೀತಿ ಇವರ ನೀತಿಗಳು ವಿಫಲ ಆಗಿವೆ ಅಂತ ಎಲ್ಲರಿಗೂ ಗೊತ್ತಾಗಿದೆ. ಬೆಲೆ ಏರಿಕೆಯಿಂದ ತರಕಾರಿ ಬೆಲೆ ಜಾಸ್ತಿ ಆಗ್ತಿದೆ. ಆರ್ಥಿಕತೆ ಸಂಪೂರ್ಣ ಕುಸಿದಿದೆ" ಎಂದು ಕಿಡಿಕಾರಿದರು.