ಚೆನ್ನೈ, ಮೇ. 08 (DaijiworldNews/AA): ಡಿಎಂಕೆ ಮತ್ತು ಎಐಎಡಿಎಂಕೆ ಮಧ್ಯೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದ ಬೆನ್ನಲ್ಲೇ ತಮಿಳುನಾಡು ಬಿಜೆಪಿ ತಟಸ್ಥವಾಗಿರಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಈ ಕುರಿತು ತಮಿಳುನಾಡು ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಯಾವ ಪಕ್ಷದ ಜೊತೆಗೂ ನಾವು ಕೈ ಜೋಡಿಸುವುದಿಲ್ಲ. ಯಾರ ಜೊತೆಗೂ ಸೇರಿ ಸರ್ಕಾರ ಮಾಡುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಯಾರಾದರೂ ಸರ್ಕಾರ ರಚನೆಗೆ ಮುಂದಾದರೂ ಕೂಡ, ಆ ಪಕ್ಷದ ಜೊತೆ ನಾವು ಹೋಗುವುದಿಲ್ಲ ಎಂದು ಸಂದೇಶ ರವಾನಿಸಿದ್ದಾರೆ. ಈ ಮೂಲಕ ಡಿಎಂಕೆ-ಎಐಡಿಎಂಕೆ ಮೈತ್ರಿ ರಚನೆಗೂ ಮುನ್ನವೇ ಸರ್ಕಾರದಿಂದ ಬಿಜೆಪಿ ತಟಸ್ಥವಾಗಿರಲು ನಿರ್ಧರಿಸಿದೆ.