ಕೋಲ್ಕತ್ತಾ, ಮೇ. 07 (DaijiworldNews/AA): ಪಶ್ಚಿಮ ಬಂಗಾಳವನ್ನು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸುವಂತೆ ಬಾಂಗ್ಲಾದೇಶದ ನಾಯಕರೊಬ್ಬರು ಮಮತಾ ಬ್ಯಾನರ್ಜಿ ಅವರಿಗೆ ಒತ್ತಾಯಿಸಿದ್ದಾರೆ.

ಬಾಂಗ್ಲಾದೇಶದ ನಾಯಕ ಮೊಹಮ್ಮದ್ ನೂರುಲ್ ಹುಡಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, "ದೆಹಲಿಯ ವಿರುದ್ಧ ಯುದ್ಧ ಘೋಷಿಸಿ. ನಿಮ್ಮ ಬೆನ್ನಿಗೆ 17 ಕೋಟಿ ಬಾಂಗ್ಲಾದೇಶಿ ಮುಸ್ಲಿಮರು ನಿಲ್ಲುತ್ತಾರೆ" ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ನೂರುಲ್ ಹುಡಾ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, " ನೀವು ಯಾವುದೇ ಕಾರಣಕ್ಕೂ ಸೋಲೊಪ್ಪಬಾರದು. ಪಶ್ಚಿಮ ಬಂಗಾಳವನ್ನು ಸ್ವತಂತ್ರ ಎಂದು ಘೋಷಿಸಿ. ಭಾರತ ಸರ್ಕಾರದ ವಿರುದ್ಧ ಯುದ್ಧ ಆರಂಭಿಸಿ" ಎಂದು ಹೇಳಿದ್ದಾರೆ.
ಇನ್ನು ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ತನ್ನನ್ನು ತಾನು ಬಾಂಗ್ಲಾದೇಶದ ನಾಯಕನೆಂದು ಬಿಂಬಿಸಿಕೊಂಡಿದ್ದಾನೆ. ಆದರೆ ಆತನ ನಿಜವಾದ ಗುರುತಿನ ಬಗ್ಗೆ ಗೊಂದಲ ಮೂಡಿದೆ.