ಬೆಂಗಳೂರು, ಮೇ. 07 (DaijiworldNews/AK): ಡಿಜಿಪಿ ರಾಮಚಂದ್ರರಾವ್ ಈ ಈ ತಿಂಗಳಲ್ಲೇ ನಿವೃತ್ತಿ ಆಗುತ್ತಿದ್ದಾರೆ ಎಂದು ಅಮಾನತು ವಾಪಸ್ ಪಡೆದಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಅವರ ಅನುಮತಿ ಪಡೆದು ಡಿಪಿಆರ್ ಅಮಾನತು ವಾಪಸ್ ಪಡೆದಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಿವೃತ್ತಿ ಆಗುತ್ತಾರೆ ಎಂಬ ಕಾರಣಕ್ಕೆ ಅಮಾನತು ವಾಪಸ್ ಪಡೆದಿದ್ದಾರೆ.
ಸಿಎಂ ಬಳಿ ರಾಮಚಂದ್ರರಾವ್ ವಿವರಣೆ ಕೊಟ್ಟಿದ್ದರು. ನಿವೃತ್ತಿ ಆಗುವ ಮುನ್ನ ಪೆನ್ಶನ್ ಸೆಟಲ್ ಮಾಡಬೇಕು ತನಿಖೆ ಮುಂದುವರೆಸಿ ಎಂದು ಮನವಿ ಮಾಡಿದ್ದರು. ಈ ವಿಚಾರ ನನಗೆ ಗೊತ್ತಿತ್ತು, ಆದರೆ ಅಮಾನತು ವಾಪಸ್ ಪಡೆದಿದ್ದು ಸರಿ, ತಪ್ಪು ಅಂತ ನಾನು ಹೇಳೋಕೆ ಆಗಲ್ಲ. ಇದು ಡಿಪಿಆರ್ ಮತ್ತು ಮುಖ್ಯಮಂತ್ರಿಗಳಿಗೆ ಅಡಿಯಲ್ಲಿ ಬರುತ್ತದೆ, ಅವರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕೇಸ್ ಅಂತಿಮ ಆಗೋವರೆಗೂ ತನಿಖೆ ನಡೆಯುತ್ತದೆ. ತನಿಖೆಯಲ್ಲಿ ಬಂದ ವರದಿ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.