ಬಿಹಾರ,ಮೇ. 07 (DaijiworldNews/AK): ವೈಶಾಲಿ ಜಿಲ್ಲೆಯ ಹಾಜಿಪುರದ ಅಭಿಷೇಕ್ ಚೌಹಾಣ್ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ 102 ರ್ಯಾಂಕ್ ಪಡೆದರು. ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ಅಭಿಷೇಕ್ ಪುರುಲಿಯಾದ ರಾಮಕೃಷ್ಣ ಮಿಷನ್ ಶಾಲೆಯಲ್ಲಿ 10 ನೇ ತರಗತಿಯವರೆಗೆ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಅವರು ಹಾಜಿಪುರದಲ್ಲಿ 12 ನೇ ತರಗತಿಯ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರ ಶಾಲಾ ವರ್ಷಗಳಲ್ಲಿ, ಅವರು ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ನಂತರ ಐಐಟಿಯಿಂದ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು.
ನಂತರ ಸ್ಟಾರ್ಟ್ ಅಪ್ ಕೆಲಸಕ್ಕೆ ಸೇರಿದರು. ಆದರೆ ಅಭಿಷೇಕ್ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಲು ಬಹುರಾಷ್ಟ್ರೀಯ ಕಂಪನಿಯಲ್ಲಿ ತನ್ನ ಕೆಲಸವನ್ನು ತೊರೆದರು. ಬಳಿಕ ನಾಗರಿಕ ಸೇವೆಗಳಿಗೆ ತಯಾರಿ ನಡೆಸುವತ್ತ ಗಮನಹರಿಸಲು ನಿರ್ಧರಿಸಿದರು. ಕೊನೆಗೆ ಎರಡನೇ ಪ್ರಯತ್ನದಲ್ಲಿ ನಾಗರಿಕ ಸೇವೆಗಳ ಪರೀಕ್ಷೆ (CSE) 2025 ರಲ್ಲಿ 102 ರ್ಯಾಂಕ್ ಪಡೆದರು. ಒಟ್ಟಾರೆ ಕಷ್ಟ, ಪರಿಶ್ರಮ ಮತ್ತು ಛಲದ ಮೂಲಕ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಮೂಲಕ ಅಭಿಷೇಕ್ ಯಶಸ್ಸು ಕಂಡರು.