ಕೋಲ್ಕತ್ತಾ, ಮೇ. 04 (DaijiworldNews/AA): ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ 180 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚಿಸಲು ಸಜ್ಜಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಅವರು ಇದೀಗ ಅಧಿಕಾರದಿಂದ ಕೆಳಗಿಳಿಯುವ ಸಾಧ್ಯತೆಯಿದೆ. ಸದ್ಯ ಮುನ್ನಡೆ ಸಾಧಿಸಿರುವ ಬಿಜೆಪಿಯಲ್ಲಿ ಆಗಲೇ ಸಿಎಂ ಪಟ್ಟಕ್ಕಾಗಿ ಪೈಟ್ ಶುರುವಾಗಿದೆ.
ಪ್ರಸ್ತುತ ವಿರೋಧ ಪಕ್ಷದ ಪ್ರಬಲ ನಾಯಕನಾಗಿರುವ ಸುವೇಂದು ಅಧಿಕಾರಿ, ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸಮಿಕ್ ಭಟ್ಟಾಚಾರ್ಯ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಮುಖ್ಯಮಂತ್ರಿ ರೇಸ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ
ಪಶ್ಚಿಮ ಬಂಗಾಳ ಚುನಾವಣೆ 2026 ಫಲಿತಾಂಶಗಳ ಬಗ್ಗೆ ಮಾತನಾಡಿದ ಸುವೇಂದು ಅಧಿಕಾರಿ ಅವರು, "ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಮಮತಾ ಬ್ಯಾನರ್ಜಿ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಕೆಲವು ವಾರ್ಡ್ಗಳು ಬಿಜೆಪಿ ಪರವಾಗಿದ್ದರೂ, ಬಹುಸಂಖ್ಯಾತ ವಾರ್ಡ್ಗಳು ತೆರೆದಾಗ ತಮ್ಮ ಪರವಾಗಿ ಫಲಿತಾಂಶ ಬರುತ್ತದೆ. ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರೋದು ನಿಶ್ಚಿತ" ಎಂದು ಹೇಳಿದ್ದಾರೆ.