ಚೆನ್ನೈ, ಏ. 18 (DaijiworldNews/AA): ಏಪ್ರಿಲ್ 23ರಂದು ದೆಹಲಿಯ ಅಹಂಕಾರವನ್ನೂ, ಅದನ್ನು ಬೆಂಬಲಿಸುವವರನ್ನೂ ನಾವು ಒಟ್ಟಾಗಿ ಸೋಲಿಸೋಣ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕರೆ ನೀಡಿದ್ದಾರೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ತಮಿಳುನಾಡು ದೆಹಲಿಯನ್ನು ಸೋಲಿಸಿದೆ! ಚುನಾವಣೆಯಲ್ಲಿಯೂ ಬಿಜೆಪಿಯನ್ನು ಹಾಗೂ ಎಐಎಡಿಎಂಕೆಯನ್ನೂ ಸೋಲಿಸಲು ಹೋರಾಟ ಮುಂದುವರಿಸೋಣ" ಎಂದು ಹೇಳಿದರು.
"ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣ ಜಾರಿಗೆ ತರಬೇಕೆಂದು ತಾನು ಬಯಸಿದ್ದೇನೆ, ಆದರೆ ಆತಂಕ ಕ್ಷೇತ್ರ ಮರುವಿಂಗಡಣೆಯ ಕುರಿತದ್ದಷ್ಟೇ ಎಂದು ಸ್ಟಾಲಿನ್ ಹೇಳಿದರು. ಡಿಲಿಮಿಟೇಶನ್ ನ್ಯಾಯಸಮ್ಮತವಾಗಿರಲು, ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ, ಸೂಕ್ಷ್ಮವಾಗಿ ಚಿಂತನೆ ಅಗತ್ಯ. ನಾವು ಸಲಹೆ, ಸ್ಪಷ್ಟತೆ ಮತ್ತು ಒಪ್ಪಿಗೆಯನ್ನು ಕೇಳಿದ್ದೇವೆ. ಕನಿಷ್ಠ ಮಟ್ಟದಲ್ಲಿ ಮಸೂದೆಯನ್ನು ಬೇರ್ಪಡಿಸಿ ಜಾರಿಗೆ ತರಬಹುದಿತ್ತು" ಎಂದು ಪೋಸ್ಟ್ ಮಾಡಿದ್ದಾರೆ.
"ಆದರೆ ಎನ್ಡಿಎ ಸರ್ಕಾರ ಅದನ್ನು ಬೇರ್ಪಡಿಸಿ ಜಾರಿಗೆ ತರಲಿಲ್ಲ. ಇದು ನ್ಯಾಯವಲ್ಲ. ಇದು ಕೇವಲ ಪ್ರದರ್ಶನ ಎಂದು ಹೇಳಿ, ತಮಿಳುನಾಡಿನ ಮಹಿಳೆಯರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದರು. ಭಾರತದ ಮಹಿಳೆಯರು ಮತ ಬ್ಯಾಂಕ್ ಅಲ್ಲ. ಅವರು ಗಮನಿಸುತ್ತಿದ್ದಾರೆ. ಸತ್ಯ ಸರಳವಾಗಿತ್ತು - ಬಿಜೆಪಿ ಇದನ್ನು ಮಾಡಬಹುದಿತ್ತು, ಆದರೆ ಮಾಡಲಿಲ್ಲ" ಎಂದು ತಿಳಿಸಿದರು.