ಬೆಂಗಳೂರು, ಏ. 17 (DaijiworldNews/AA): ವಿದ್ಯುತ್ ದರ ಏರಿಕೆ ಮಾಡುವ ಮೂಲಕ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಒಂದು ಯೂನಿಟ್ಗೆ 56 ಪೈಸೆ ಹೆಚ್ಚಳ ಮಾಡಿ ಕೆಇಆರ್ಸಿ ಆದೇಶ ಹೊರಡಿಸಿದೆ.

ಈ ನೂತನ ದರ ಏರಿಕೆಯು ಮೇ ತಿಂಗಳಿನಿಂದ ಅನ್ವಯವಾಗಲಿದೆ. ಅಂದರೆ ಗ್ರಾಹಕರು ಮೇ ತಿಂಗಳಲ್ಲಿ ಪಡೆಯುವ ಬಿಲ್ನಲ್ಲಿ ಪ್ರತಿ ಯೂನಿಟ್ಗೆ 56 ಪೈಸೆಯಷ್ಟು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.
2024-25 ಆರ್ಥಿಕ ವರ್ಷದಲ್ಲಿ 34,084 ಕೋಟಿ ಕೆಇಆರ್ಸಿ ಆದಾಯ ನಿರೀಕ್ಷಿಸಿತ್ತು. ಆದರೆ 32,019 ಕೋಟಿಯಷ್ಟೇ ಆದಾಯ ಬಂದಿದ್ದು, 2,068 ಕೋಟಿ ರೂಪಾಯಿಗಳಷ್ಟು ಆರ್ಥಿಕ ಕೊರತೆಯುಂಟಾಗಿದೆ. ಈ ಹಿನ್ನೆಲೆ 2,068೮ ಕೋಟಿ ಹಣದ ಕೊರತೆಯನ್ನ ಗ್ರಾಹಕರಿಂದ ಸಂಗ್ರಹಿಸಲು ಕೆಇಆರ್ಸಿ ಅನುಮತಿ ನೀಡಿದೆ.