ನವದೆಹಲಿ, ಮಾ. 23 (DaijiworldNews/AA): ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಷೇರು ಮಾರುಕಟ್ಟೆ ಏರಿಳಿತವಾಗಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆ ಸತತ ಇಳಿಕೆಯಾಗಿದೆ.

ಚಿನ್ನದ ದರ ಸುಮಾರು 1,200 ರೂ. ಇಳಿಕೆಯಾಗಿದ್ದರೆ ಕೆಜಿ ಬೆಳ್ಳಿ ದರ ಸುಮಾರು 30 ಸಾವಿರ ರೂ. ಇಳಿಕೆಯಾಗಿದೆ. ಮಾ. 20 ರಂದು 10 ಗ್ರಾಂ 24 ಕ್ಯಾರಟ್ನ ಅಪರಂಜಿ ಚಿನ್ನದ ದರ 14,722 ರೂ. ಇದ್ದರೆ ಇಂದು 13,514 ರೂ.ಗೆ ಕುಸಿದಿದೆ. ಇನ್ನು 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಶುಕ್ರವಾರ 14,369 ರೂ. ಇದ್ದರೆ ಇಂದು 13,190 ರೂ.ಗೆ ಇಳಿದಿದೆ.
1 ಕೆಜಿ ಬೆಳ್ಳಿ (999) ದರ ಶುಕ್ರವಾರ 2,32,364 ರೂ. ಇದ್ದರೆ ಇಂದು 30,864 ರೂ. ಇಳಿಕೆಯಾಗಿ 2,01,500 ರೂ.ಗೆ ತಲುಪಿದೆ. ಇನ್ನು ಚಿನ್ನ, ಬೆಳ್ಳಿ ದರ ಇಳಿಕೆಯಾಗಿದ್ದರಿಂದ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ಆಫ್ ಇಂಡಿಯಾದ ಎಂಸಿಎಕ್ಸ್ ಷೇರು ಮೌಲ್ಯ ಇಂದು ಒಂದು ದಿನಕ್ಕೆ 100.10 ರೂ.(4.15%) ಕುಸಿದಿದೆ.