ಬೆಂಗಳೂರು, ಜ. 02 (DaijiworldNews/AA): ಬಳ್ಳಾರಿ ರಾಜಕೀಯ ಘರ್ಷಣೆ ವಿಚಾರವಾಗಿ ಸರ್ಕಾರ ಸೂಕ್ತ ತನಿಖೆ ನಡೆಸಬೇಕೆಂದು ಮಾಜಿ ಸಚಿವ, ಶಾಸಕ ಸುರೇಶ್ ಕುಮಾರ್ ಗೃಹ ಇಲಾಖೆ ಮತ್ತು ಸರ್ಕಾರವನ್ನ ಒತ್ತಾಯಿಸಿದ್ದಾರೆ.

ಬಳ್ಳಾರಿ ಘಟನೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, "ಬಳ್ಳಾರಿ ಘಟನೆ ದುರದೃಷ್ಟ ಘಟನೆ. ಬಳ್ಳಾರಿ ಪೊಲೀಸರು ಪರಿಸ್ಥಿತಿ ಗ್ರಹಿಸೋದರಲ್ಲಿ ವಿಫಲವಾಗಿದ್ದಾರೆ. ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಹಾಕೋದು, ಹೊಡೆಯೋಕೆ ಬರೋದು ಇದೆಲ್ಲ ಯಾಕೆ ಆಯ್ತು. ಪೊಲೀಸರು ಮುಂಜಾಗ್ರತಾ ಕ್ರಮವಹಿಸಬೇಕಿತ್ತು. ಪ್ರಕರಣದ ಬಗ್ಗೆ ಗೃಹ ಸಚಿವರು, ರಾಜ್ಯ ಸರ್ಕಾರ ಗಂಭೀರವಾದ ವಿಚಾರಣೆ ಮಾಡಬೇಕು" ಎಂದು ತಿಳಿಸಿದ್ದಾರೆ.
"ಈ ವರ್ಷ ಬಹಳ ಚುನಾವಣೆ ಬರುತ್ತಿವೆ. ಹೀಗಾಗಿ ಬೇರೆ ಕಡೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಇದರ ಹಿಂದೆ ಯಾರಿದ್ದಾರೆ ಅಂತ ಸೂಕ್ತ ತನಿಖೆ ಆಗಬೇಕು. ಜನಾರ್ದನ ರೆಡ್ಡಿ ಕೆಟ್ಟ ಹೆಸರು ತರುವ ಪ್ರಯತ್ನ ಇದರಲ್ಲಿ ಆಗ್ತಿದೆ. ಬಳ್ಳಾರಿ ಶಾಸಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಶಾಂತಿ ಕಾಪಾಡಬೇಕು. ಜನಾರ್ದನ ರೆಡ್ಡಿ ಬರುವ ಮುನ್ನವೇ ಈ ಘಟನೆ ಆಗಿದೆ. ಇದರ ಹಿಂದಿನ ಕೈವಾಡ ಯಾರದ್ದು ಎಂದು ಪತ್ತೆಹಚ್ಚಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
.