ಶಿವಮೊಗ್ಗ, ಡಿ. 18 (DaijiworldNews/AK): ಧರ್ಮಸ್ಥಳ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಇಂದು ಶಿವಮೊಗ್ಗದ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡಿದ್ದಾರೆ.

ಸೆಪ್ಟೆಂಬರ್ 9 ರಂದು ಶಿವಮೊಗ್ಗ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ಬೆಳ್ತಂಗಡಿ ಜೆಎಂಎಫ್ಸಿ ಕೋರ್ಟ್ ಅದೇಶದ ಹಿನ್ನಲೆ ಶಿವಮೊಗ್ಗಕ್ಕೆ ಶಿಫ್ಟ್ ಆಗಿದ್ದ ಚಿನ್ನಯ್ಯ ಕಾರಾಗೃಹದ ಕಾವೇರಿ ಬ್ಯಾರಕ್ನಲ್ಲಿದ್ದ. ಅಲ್ಲದೇ ಚಿನ್ನಯ್ಯನಿಗೆ ಕಳೆದ ನವೆಂಬರ್ 24 ರಂದು ಬೆಳ್ತಂಗಡಿ ನ್ಯಾಯಾಲಯ 12 ಷರತ್ತುಗಳನ್ನ ವಿಧಿಸಿ ಒಂದು ಲಕ್ಷ ಬಾಂಡ್ ಇಬ್ಬರು ಸ್ಥಳೀರು ಶೂರಿಟಿ ಪಡೆಯಬೇಕು ಎಂದು ಜಾಮೀನು ಮಂಜೂರು ಮಾಡಿತ್ತು.
ಆದರೆ ಜಾಮೀನು ಮಂಜೂರಾಗಿ 24 ದಿನ ಕಳೆದರೂ ಕೂಡ ಜಾಮೀನು ನೀಡಲು ಯಾರು ಮುಂದೆ ಬಾರದ ಕಾರಣ ಶಿವಮೊಗ್ಗ ಕಾರಾಗೃಹದಲ್ಲೇ ಚಿನ್ನಯ್ಯ ಇರಬೇಕಾಯಿತು. ಇಂದು ಬೆಳಗ್ಗೆ 8-30ರ ಸುಮಾರಿಗೆಚಿನ್ನಯ್ಯ ಬಿಡುಗಡೆಗೊಂಡಿದ್ದಾರೆ.