ಮುಂಬೈ,,ಅ. 08 (DaijiworldNews/AK): 60 ಕೋಟಿ ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾಗೆ ಭಾರಿ ಹಿನ್ನಡೆಯಾಗಿದೆ. ಅಮೆರಿಕದ ಲಾಸ್ ಏಂಜಲೀಸ್ ಸೇರಿದಂತೆ ಇತರ ದೇಶಗಳ ಪ್ರವಾಸಕ್ಕೆ ತೆರಳಲು ಮುಂದಾಗಿದ್ದ ಶಿಲ್ಪಾ ಶೆಟ್ಟಿ ದಂಪತಿಗೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ.

ವಿದೇಶಕ್ಕೆ ಹೋಗುವುದಾದರೆ 60 ಕೋಟಿ ರೂಪಾಯಿ ಠೇವಣಿ ಇಟ್ಟು ಹೋಗಿ ಎಂದು ಖಡಕ್ ಆಗಿ ಹೇಳಿದೆ. 60 ಕೋಟಿ ರೂಪಾಯಿ ವಂಚನೆ ಆರೋಪದಡಿ ತಮ್ಮ ವಿರುದ್ಧ ಹೊರಡಿಸಲಾದ ಲುಕ್ಔಟ್ ನೋಟಿಸ್ ರದ್ದುಗೊಳಿಸುವಂತೆ ಕೋರಿ ಶಿಲ್ಪಾ ಶೆಟ್ಟಿ, ರಾಜ್ಕುಂದ್ರಾ ಬಾಂಬೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಕಾರ್ಯಕ್ರಮ ನಿಮಿತ್ತ ಲಾಸ್ ಎಂಜಲೀಸ್ ಮತ್ತು ಇತರ ದೇಶಗಳಿಗೆ ತೆರಳಬೇಕಿತ್ತು. ಹೀಗಾಗಿ ಬಾಂಬೆ ಹೈಕೋರ್ಟ್, ಲಾಸ್ ಏಂಜಲೀಸ್ ಮತ್ತು ಇತರ ವಿದೇಶಗಳಿಗೆ ಪ್ರಯಾಣಿಸಲು ಬಯಸಿದರೆ ಮೊದಲು 60 ಕೋಟಿ ರೂಪಾಯಿ ಡೆಪಾಸಿಟ್ ಇಡಿ ಎಂದು ಹೇಳಿದೆ.
2015 ರಿಂದ 2023ರ ನಡುವೆ, ದಂಪತಿ ತಮ್ಮ ವ್ಯವಹಾರ ವಿಸ್ತರಿಸುವ ನೆಪದಲ್ಲಿ ನನ್ನಿಂದ 60 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಉದ್ಯಮಿ ದೀಪಕ್ ಕೊಠಾರಿ ಆರೋಪಿಸಿದ್ದರು. ದಂಪತಿ ಹಣವನ್ನು ಸಾಲವಾಗಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.