ಮೈಸೂರು, ಅ. 07 (DaijiworldNews/AA): ಭಾರತ ಮತ್ತು ನೇಪಾಳದ ಜಗದ್ಗುರುಗಳ ರಾಯಭಾರಿಯಾದ ನುನ್ಸಿಯೋ ಆರ್ಚ್ಬಿಷಪ್ ಲಿಯೋಪೋಲ್ಡೊ ಗಿರೆಲ್ಲಿ ಅವರು, ಕಾರವಾರದ ಬಿಷಪ್ ಡಾ. ಡುಮಿಂಗ್ ಡಯಾಸ್ ಅವರನ್ನು ಶಿವಮೊಗ್ಗ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿಯಾಗಿ ನೇಮಕ ಮಾಡಿರುವುದಾಗಿ ಘೋಷಿಸಿದ್ದಾರೆ.

ಕಾರವಾರದ ಬಿಷಪ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಡುಮಿಂಗ್ ಡಯಾಸ್ ಅವರು, ಹೊಸ ಬಿಷಪ್ ನೇಮಕವಾಗುವವರೆಗೆ ಹೆಚ್ಚುವರಿಯಾಗಿ ಶಿವಮೊಗ್ಗ ಧರ್ಮಪ್ರಾಂತ್ಯದ ಆಡಳಿತವನ್ನು ನೋಡಿಕೊಳ್ಳಲಿದ್ದಾರೆ.
ಡಾ. ಡುಮಿಂಗ್ ಡಯಾಸ್ ಅವರು 2017 ರಲ್ಲಿ ಕಾರವಾರದ ಬಿಷಪ್ ಆಗಿ ನೇಮಕಗೊಂಡಿದ್ದರು.
ಆಡಳಿತಾತ್ಮಕ ವ್ಯವಸ್ಥೆಗಳ ಕುರಿತು ಹೆಚ್ಚಿನ ವಿವರಗಳನ್ನು ಧರ್ಮಪ್ರಾಂತ್ಯವು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.