ಚೆನ್ನೈ, ಅ. 07 (DaijiworldNews/AA): ತಮಿಳುನಾಡಿನ ಕರೂರಿನಲ್ಲಿ ರ್ಯಾಲಿ ವೇಳೆ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಟ-ರಾಜಕಾರಣಿ ವಿಜಯ್ ಅವರು ವೀಡಿಯೊ ಕರೆಗಳ ಮೂಲಕ ವೈಯಕ್ತಿಕವಾಗಿ ಮಾತನಾಡಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ವಿಡಿಯೋ ಕರೆ ಮಾಡಿದ ವೇಳೆ ನಾನು ನಿಮ್ಮೊಂದಿಗಿದ್ದೇನೆ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ವಿಜಯ್ ದುಃಖಿತ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ. ವೀಡಿಯೊ ಕರೆಯ ಸಮಯದಲ್ಲಿ ರೆಕಾರ್ಡ್ ಮಾಡಬೇಡಿ ಅಥವಾ ಫೋಟೋ ತೆಗೆದುಕೊಳ್ಳಬೇಡಿ ಎಂದು ವಿಜಯ್ ಅವರ ತಂಡ ಮೃತರ ಕುಟುಂಬಗಳನ್ನು ವಿನಂತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರತಿ ಕುಟುಂಬದೊಂದಿಗೂ ಸುಮಾರು 20 ನಿಮಿಷಗಳ ಕಾಲ ನಡೆದಿತ್ತು. ಈ ಸಮಯದಲ್ಲಿ ವಿಜಯ್ ತೀವ್ರ ಸಂತಾಪ ವ್ಯಕ್ತಪಡಿಸಿ ಸಹಾಯ ಮಾಡುವುದಾಗಿ ಹಾಗೂ ಶೀಘ್ರದಲ್ಲೇ ಕುಟುಂಬಗಳನ್ನು ಖುದ್ದಾಗಿ ಭೇಟಿ ಮಾಡುವುದಾಗಿ ವಿಜಯ್ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.