ಬೆಂಗಳೂರು, ಸೆ. 23 (DaijiworldNews/AK): ಸರ್ಕಾರ ಮಾಡುತ್ತಿರುವ ಜಾತಿ ಗಣತಿ ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಸಿಸಿ ಪಾಟೀಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಾತಿ ಗಣತಿ ಸರ್ವೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಮಾಡುತ್ತಿರುವ ಈ ಜಾತಿ ಗಣತಿ ನಾವು ಒಪ್ಪಲ್ಲ. ಗಣತಿ ಪ್ರಾರಂಭ ಆಗಿದೆ. ಇವತ್ತು ಹೈಕೋರ್ಟ್ನಲ್ಲಿ ಕೇಸ್ ಇದೆ. ಏನಾಗುತ್ತೋ ನೋಡೋಣ. ಹೈಕೋರ್ಟ್ನಿಂದ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಇದು ಯಾವ ರೀತಿ ಸರ್ಕಾರ ಅಂತ ಅರ್ಥ ಆಗುತ್ತಿಲ್ಲ. ಒಂದು ಸಾರಿ ಜಾತಿ ಗಣತಿ ಅಂತಾರೆ. ಇನ್ನೊಂದು ಸಾರಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎನ್ನುತ್ತಾರೆ. ಹಾಗಾದ್ರೆ ಇದುವರೆಗೂ ಇವರ ಬಳಿ ಅಂಕಿಅಂಶಗಳು ಇಲ್ಲವಾ? ಈ ರೀತಿ ಸರ್ಕಾರ ನಡೆಸಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಈ ಗಣತಿ ಮಾಡಿಸುತ್ತಿದ್ದಾರೆ ಅನ್ನಿಸುತ್ತೆ. ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ವಿರೋಧಿ ಅಲೆ ಪಕ್ಷದಲ್ಲಿ ಮತ್ತು ಪಕ್ಷದ ಹೊರಗೆ ಇದೆ. ಅದನ್ನ ಮರೆ ಮಾಚಿಸಲು ಈ ಗಣತಿ ಮಾಡಿಸುತ್ತಿದ್ದಾರೆ ಎನಿಸುತ್ತಿದೆ ಎಂದರು.