ಚಂಡೀಗಢ,ಏ.24 (DaijiworldNews/AK): ಪಂಜಾಬ್ನ ಫಿರೋಜ್ಪುರ ಸೆಕ್ಟರ್ನಲ್ಲಿ ಅಕಸ್ಮಿಕವಾಗಿ ಗಡಿರೇಖೆ ದಾಟಿದ ಬಿಎಸ್ಎಫ್ ಜವಾನ್ ಒಬ್ಬರನ್ನ ಪಾಕಿಸ್ತಾನ ರೇಂಜರ್ಗಳು ಬಂಧಿಸಿದ್ದಾರೆ.

ಪಿ.ಕೆ ಸಿಂಗ್ ಬಂಧಿತ ಬಿಎಸ್ಎಫ್ ಯೋಧ ಎನ್ನಲಾಗಿದೆ. ಪಿಕೆ ಸಿಂಗ್ 182ನೇ ಬಿಎಸ್ಎಫ್ ಬೆಟಾಲಿಯನ್ನ ಕಾನ್ಸ್ಟೇಬಲ್ ಅಂತ ತಿಳಿದುಬಂದಿದೆ. ಯೋಧನ ಬಿಡುಗಡೆಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಬಿಎಸ್ಎಫ್ ಹಾಗೂ ಪಾಕ್ ರೇಂಜರ್ಗಳ ತುರ್ತು ಸಭೆ ಕರೆಯಲಾಗಿದೆ.
ಭಾರತದ ಪ್ರತೀಕಾರದ ಎಚ್ಚರಿಕೆ ಬೆನ್ನಲ್ಲೇ ಪಾಕ್ಗೆ ಆತಂಕ ಶುರುವಾಗಿದೆ. ಭಾರತದ ದಾಳಿ ಮಾಡಿದರೆ ನಾವೂ ಪ್ರತಿದಾಳಿ ಮಾಡ್ತೇವೆ ಅಂತ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾನೆ. ಅಲ್ಲದೇ, ಪಹಲ್ಗಾಮ್ ಉಗ್ರದಾಳಿಯಲ್ಲಿ ನಮ್ಮ ಕೈವಾಡ ಇಲ್ಲ. ಆರೋಪಕ್ಕೆ ಸಾಕ್ಷಿ ಕೊಡಿ ಅಂತ ವಿದೇಶಾಂಗ ಸಚಿವ ಹೇಳಿದ್ದಾರೆ.
ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ. ಸಿಂಧೂ ಜಲ ಒಪ್ಪಂದ ರದ್ದು ಯುದ್ಧಕ್ಕೆ ಸಮ. ನಾವೂ ಪ್ರತೀಕಾರಕ್ಕೆ ಸಿದ್ಧ ಅಂತ ಪಾಕಿಸ್ತಾನ ಹೇಳಿದೆ.