ನವದೆಹಲಿ, ಏ.24 (DaijiworldNews/AA): ಪ್ರವಾಸಕ್ಕೆಂದು ಹೋಗಿ ಕಾಶ್ಮೀರದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಜನರಿಗೆ ತವರಿಗೆ ವಾಪಸ್ ಆಗಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಚೇರಿ, ಸ್ಥಳೀಯ ಸಚಿವರೊಂದಿಗೆ ಪ್ರಹ್ಲಾದ ಜೋಶಿ ಅವರು ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಈ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಚೇರಿ, ಸ್ಥಳೀಯ ಸಚಿವರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತುಕತೆ ನಡೆಸಿದ್ದು. ಪ್ರಧಾನಿಗಳ ಕಚೇರಿ, ಗೃಹ ಸಚಿವರ ಕಚೇರಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕರ್ನಾಟಕದವರನ್ನು ಸುರಕ್ಷಿತರಾಗಿ ಹಿಂದಿರುಗಿಸಲು ವ್ಯವಸ್ಥೆ ನಡೆಯುತ್ತಿದೆ ಎಂದರು.
ಗ್ರಾಹಕ ವ್ಯವಹಾರಗಳ ಸಚಿವರಾಗಿ ವೈಮಾನಿಕ ಟಿಕೆಟ್ ದರಕ್ಕೆ ಬ್ರೇಕ್ ಹಾಕಲಾಗಿದೆ. ಈ ಪರಿಸ್ಥಿತಿಯಲ್ಲಿ ಟಿಕೆಟ್ ದರ ಹೆಚ್ಚಳ ಮಾಡದಂತೆ ಡಿಜಿಸಿಎ ಹಾಗೂ ವಿಮಾನಯಾನ ಸಚಿವಾಲಯಕ್ಕೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರ ಶೂನ್ಯ ಅಸಹಿಷ್ಣುತೆ ಪದ್ದತಿ ಪಾಲಿಸುತ್ತಿದೆ. ನಿನ್ನೆ ನಡೆದ ದುರ್ಘಟನೆಯನ್ನು ಸಹಿಸುವುದಿಲ್ಲ ಶೂನ್ಯ ಅಸಹಿಷ್ಣುತೆ ಪದ್ದತಿಯಲ್ಲಿ ಮುಂದಿನ ಕೆಲಸ ನಡೆಯಲಿದೆ ಎಂದು ಹೇಳಿದರು.