ನವದೆಹಲಿ, ಏ.15(DaijiworldNews/TA): 1948 ರಲ್ಲಿ ಪ್ರಾಂತ್ಯವಾಗಿ ರಚನೆಯಾದ ವಾರ್ಷಿಕೋತ್ಸವದ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹಿಮಾಚಲ ಪ್ರದೇಶದ ಜನತೆಗೆ ಶುಭಾಶಯ ಕೋರಿದರು.

'ದೇವಭೂಮಿ' ತನ್ನ ಅದ್ಭುತ ಸಂಸ್ಕೃತಿಗೆ ಹೆಸರುವಾಸಿಯಾಗಿದೆ . ಅಲ್ಲಿನ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ಶೌರ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರು ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ರಾಜ್ಯದ ನಿರಂತರ ಅಭಿವೃದ್ಧಿಗಾಗಿ ಜನರಿಗೆ ಹಾರೈಸಿದರು. ಏಪ್ರಿಲ್ 15 'ಹಿಮಾಚಲ ದಿವಸ್' ಎಂದು ಆಚರಿಸಲಾಗುತ್ತದೆ, ಆದರೆ ಈ ಪ್ರಾಂತ್ಯಕ್ಕೆ ಜನವರಿ 25, 1971 ರಂದು ಪೂರ್ಣ ರಾಜ್ಯತ್ವ ನೀಡಲಾಯಿತು.