ಬೆಂಗಳೂರು, ಏ.08 (DaijiworldNews/AA): ಮಾರ್ಚ್ 1 ರಿಂದ ಮಾರ್ಚ್ 20ರ ವರೆಗೆ ನಡೆದಿದ್ದ 2025 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟವಾಗಲಿದೆ.

ಇಂದು ಮಧ್ಯಾಹ್ನ 12.30ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಲ್ಲೇಶ್ವರದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಲಿದ್ದಾರೆ. ಸುದ್ದಿಗೋಷ್ಠಿಯ ಬಳಿಕ ಮಧ್ಯಾಹ್ನ 1.30 ಗಂಟೆಗೆ ವೆಬ್ಸೈಟ್ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದುದಾಗಿದೆ.
ಈ ಬಾರಿ ಸುಮಾರು 7.13 ಲಕ್ವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಇನ್ನು ದ್ವಿತೀಯ ಪಿಯುಸಿ ಫಲಿತಾಂಶವನ್ನು karresults.nic.in, kseab.karnataka.gov.in ಈ ಎರಡು ವೆಬ್ ಸೈಟ್ಗಳಲ್ಲಿ ನೋಡಬಹುದಾಗಿದೆ.