ಮಹಾರಾಷ್ಟ್ರ, ಏ.06(DaijiworldNews/TA): ಕಾಲೇಜಿನ ಬೀಳ್ಕೊಡುಗೆ ಸಮಾರಂಭದ ವೇಳೆ ವೇದಿಕೆಯ ಮೇಲೆ ಭಾಷಣ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಜೀವ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ವರ್ಷಾ ಖಾರತ್ (20) ಮೃತ ವಿದ್ಯಾರ್ಥಿನಿಯಾಗಿದ್ದಾಳೆ.

ವರ್ಷಾ ಖರತ್ ಮಹಾರಾಷ್ಟ್ರದ ಧಾರಶಿವ ಜಿಲ್ಲೆಯ ಪರಂಡಾದ ಆರ್ ಜಿ ಶಿಂಧೆ ಕಾಲೇಜಿನ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದು ಇತ್ತೀಚಿಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದ್ದು ವರ್ಷಾ ವೇದಿಕೆಯಲ್ಲಿ ಬೀಳ್ಕೊಡುಗೆ ಭಾಷಣ ಮಾಡಿದ್ದಾಳೆ ಅಲ್ಲದೆ ವೇದಿಕೆ ಮೇಲಿದ್ದ ಗುರುಗಳನ್ನು ತನ್ನ ಮಾತಿನಿಂದ ನಗೆಗಡಲಲ್ಲಿ ತೇಲಿಸಿದ್ದಾಳೆ .
ಇದಾದ ಕೆಲ ಹೊತ್ತಿನಲ್ಲೇ ಕುಸಿದು ಬಿದ್ದಿದ್ದಾಳೆ ಕೂಡಲೇ ವೇದಿಕೆ ಮೇಲಿದ್ದ ಉಪನ್ಯಾಸಕರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರಿಶೀಲಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.