ಜಮ್ಮು, ಏ.05 (DaijiworldNews/AA): ಜಮ್ಮುವಿನ ಆರ್.ಎಸ್ ಪುರ ವಲಯದ ಅಂತರರಾಷ್ಟ್ರೀಯ ಗಡಿಯಲ್ಲಿ ಓರ್ವ ನುಸುಳುಕೋರನನ್ನು ಬಿಎಸ್ಎಫ್ ಹೊಡೆದುರುಳಿಸಿದೆ ಎಂದು ಗಡಿ ಭದ್ರತಾ ಪಡೆ ಮಾಹಿತಿ ನೀಡಿದೆ.

ಏಪ್ರಿಲ್ 4ರ ಮಧ್ಯರಾತ್ರಿ ಜಮ್ಮು ವಲಯದಲ್ಲಿ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಚಲವಲನ ಭದ್ರತಾ ಪಡೆಗಳ ಕಣ್ಣಿಗೆ ಬಿದ್ದಿದೆ. ಆತ ಅಂತರರಾಷ್ಟ್ರೀಯ ಗಡಿ ದಾಟುತ್ತಿರುವುದನ್ನು ಕಂಡು ಎಚ್ಚರಿಕೆ ನೀಡಿವೆ. ಭದ್ರತಾ ಪಡೆಯ ಎಚ್ಚರಿಕೆಯನ್ನು ಲೆಕ್ಕಿಸದೇ ಮತ್ತೆ ಗಡಿ ದಾಟಲು ಯತ್ನಿಸಿದ್ದಾಗೆ. ಹೀಗಾಗಿ ಬಿಎಸ್ಎಫ್ ಆತನನ್ನು ಹೊಡೆದುರುಳಿಸಿದೆ.
ಆತನ ಗುರುತು ಹಾಗೂ ಉದ್ದೇಶ ಏನೆಂಬುದರ ಬಗ್ಗೆ ತನಿಖೆ ನಡೆಲಾಗುವುದು. ಆತನ ಶವವನ್ನು ಮರಣೋತ್ತತ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬಿಎಸ್ಎಫ್ನ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. ಇನ್ನು ಘಟನೆ ಬಳಿಕ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.