ಕಲಬುರಗಿ,ಮೇ 25 (Daijiworld News/MSP): ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿದೆ ಹಾಗೂ ನಮ್ಮ ಶಾಸಕರು ಯಾರೂ ಪಕ್ಷ ಬಿಡಲ್ಲ ಎಂಬ ಹೇಳಿಕೆಯ ನಡುವೆಯೇ ಕಾಂಗ್ರೆಸ್ ಪಾಳಯದಲ್ಲಿ ರೆಬಲ್ ಆಗಿರುವ ರಮೇಶ್ ಜಾರಕಿಹೊಳಿ ಬಿಜೆಪಿ ಸಂಸದರನ್ನು ಸನ್ಮಾನಿಸುವ ಮೂಲಕ ಮೈತ್ರಿಯಲ್ಲಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಿದ್ದಾರೆ.

ಇನ್ನು ಚಿಕ್ಕೋಡಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಿಜೆಪಿಗೆ ಹಾಕಿದ ಅಭಿನಂದನಾ ಬ್ಯಾನರ್ ನಲ್ಲಿ ಕಾಂಗ್ರೆಸ್ ಬಂಡಾಯ ಶಾಸಕ ಜಾರಕಿಹೊಳಿ ಪೋಟೋ ಕಾಣಿಸಿಕೊಂಡಿತ್ತು.
ಈ ಬೆಳವಣಿಗೆಗಳ ನಡುವೆ ತಮ್ಮ ಮನೆಯಲ್ಲಿ ಭೇಟಿಯಾದ ಕಲಬುರಗಿ ಶಾಸಕ ಡಾ.ಉಮೇಶ್ ಜಾಧವ್ ಮತ್ತು ಬಿಜೆಪಿ ನಾಯಕರ ಜೊತೆ ರಮೇಶ್ ಜಾಕಿಹೊಳಿ ಮಾತುಕತೆ ನಡೆಸಿದರು.
ಬಳಿಕ ನಂತರ ಸಂಸದರಾಗಿ ಆಯ್ಕೆಯಾದ ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸಿಪಿ ಯೋಗೇಶ್ವರ್, ಮಾಲಿಕಯ್ಯ ಗುತ್ತೇದಾರ್ ಸೇರಿದಂತೆ ಇತರರು ಹಾಜರಿದ್ದರು.