ಮಂಗಳೂರು, ಅ 25 (DaijiworldNews/MS): ಪ್ರತೀ ವರ್ಷದಂತೆ ಈ ಬಾರಿಯೂ ಬಿರುವೆರ್ ಕುಡ್ಲ ಪ್ರೆಂಡ್ಸ್ ಬಲ್ಲಾಳ್ಬಾಗ್ ವತಿಯಿಂದ ನಡೆದ 'ಪಿಲಿ ವೇಷ' ಜನರನ್ನು ಮನಸೂರೆಗೊಳಿಸಿದೆ.









































ಉದಯ್ ಪೂಜಾರಿ ಮತ್ತು ರಾಕೇಶ್ ಪೂಜಾರಿ ನೇತೃತ್ವದ ಮಂಗಳೂರಿನ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬಿರುವೆರ್ ಕುಡ್ಲ ಪ್ರೆಂಡ್ಸ್ ಬಲ್ಲಾಳ್ಬಾಗ್ ವಿಶೇಷವಾಗಿ ನವರಾತ್ರಿ ಸಂದರ್ಭದಲ್ಲಿ, ಮನರಂಜನೆಗೆ ಮಾತ್ರವಲ್ಲ, ಉದಾತ್ತ ಉದ್ದೇಶಕ್ಕಾಗಿ ಪಿಲಿ ವೇಷ' ವನ್ನು ಆಯೋಜಿಸುತ್ತದೆ.
ಅಕ್ಟೋಬರ್ 24 ರ ಮಂಗಳವಾರ ಬಿರುವೆರ್ ಕುಡ್ಲ,ಹುಲಿ ಕುಣಿತದ ಮೊದಲು, ತಂಡಗಳನ್ನು ಭವ್ಯವಾದ ಮೆರವಣಿಗೆಯ ಮೂಲಕ ಸ್ವಾಗತಿಸಿದರು. ನಂತರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಮತ್ತು ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಹುಲಿ ತಂಡಗಳು ಪ್ರದರ್ಶನ ನೀಡಿದವು.
ಈ ಬಾರಿಯ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸ್ಯಾಂಡಲ್ವುಡ್ ಸ್ಟಾರ್ ವಶಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿಗಳು ಹುಲಿಕುಣಿತದ ಸೊಬಗನ್ನು ಸವಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿರುವೆರ್ ಕುಡ್ಲದ ಕಾರ್ಯಕ್ರಮದಲ್ಲಿ ಹಾಜರಿದ್ದರು.