ಮಣಿಪಾಲ, ಜೂ 25 (DaijiworldNews/HR): ಮಣಿಪಾಲದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.

ಮೊಹಮ್ಮದ್ ನೂರ್(22) ಬಂಧಿತ ಯುವಕ.
ಮಣಿಪಾಲದ ಸೋನಿಯಾ ಕ್ಲಿನಿಕ್ ಬಳಿ ಇರುವ ರೋಟರಿ ಕ್ಲಬ್ ಸಮೀಪ ಈತನ ವಶದಲ್ಲಿದ್ದ 390 ಗ್ರಾಂ ತೂಕದ ಅಂದಾಜು 20 ಸಾವಿರ ರೂ.ಮೌಲ್ಯದ ಗಾಂಜಾ, ಕೃತ್ಯಕ್ಕೆ ಬಳಸಿದ ಸ್ಕೂಟರ್ ಸಹಿತ ಒಟ್ಟು 70,000ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.