ಪುತ್ತೂರು, ಜೂ 15 (DaijiworldNews/SM): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರೂರು ಪುತ್ತೂರಿನ ಮನೆಯಲ್ಲಿ ವಿಶಿಷ್ಟ ಹವನ ನಡೆಯುತ್ತಿದೆ. ಈ ಬಗ್ಗೆ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೂ.11ರಂದು ಹವನ ಪ್ರಾರಂಭಗೊಂಡಿದೆ. ಜೂ.18ರವರೆಗೆ ನಡೆಯಲಿದೆ.

ವಿದ್ವಾನ್ ಬಾಲಕೃಷ್ಣ ಆಚಾರ್ಯ ಈ ಹವನದ ಜವಾಬ್ದಾರಿಯನ್ನು ವಹಿಸಿದ್ದಾರೆ. ಒಳಗೆ ಏನಾಗುತ್ತಿದೆ ಎಂದು ಹೊರಗಿನ ವ್ಯಕ್ತಿಗಳಿಗೆ ಮಾಹಿತಿ ಹೋಗಬಾರದೆಂದು ಜಮೀನಿನ ಮುಖ್ಯ ದ್ವಾರಗಳನ್ನು ಸಂಪೂರ್ಣ ಮುಚ್ಚಿ ಗೌಪ್ಯತೆಯನ್ನು ಕಾಪಾಡಲಾಗಿದೆ ಎಂದು ಹೇಳಲಾಗುತ್ತಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿನಾಯ ಸೋಲು ಕಂಡ ಪರಿಣಾಮ ರಾಜ್ಯಾಧ್ಯಕ್ಷ ಪದವಿಯನ್ನು ತ್ಯಜಿಸಬೇಕಾದ ಅನಿವಾರ್ಯತೆಗಳು ಬಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿ ಹೋಗುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಭಯ ಎದುರಾಗಿದೆ ಎನ್ನಲಾಗಿದೆ. ಇದೆಲ್ಲದಕ್ಕೂ ಪರಿಹಾರ ಸಿಗಬೇಕು ಮತ್ತು ಉನ್ನತ ಸ್ಥಾನ ಮಾನ ಸಿಗಬೇಕೆಂಬ ನಿಟ್ಟಿನಲ್ಲಿ ಈ ಹವನ ಕೈಗೊಂಡಿರುವ ಮಾಹಿತಿ ಅಧಿಕೃತ ಮೂಲಗಳಿಂದ ಲಭ್ಯವಾಗಿದೆ.