ಬಂಟ್ವಾಳ, ಜೂ 15 (DaijiworldNews/SM): ಲಾರಿ ಮತ್ತು ಕಾರಿನ ನಡುವೆ ಈಚೆಗೆ ಸಂಭವಿಸಿದ ಅಪಘಾತ ಕೊಲೆಯತ್ನ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ಪುತ್ತೂರಿನ ಕೆಮ್ಮಿಂಜೆ ನಿವಾಸಿ ನಿತಿನ್ ಪಕ್ಕಳ ಎಂಬವರ ಕಾರಿಗೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿತ್ತು.

ಈ ಸಂದರ್ಭ ಲಾರಿ ಚಾಲಕ ಸಾಹುಲ್ ಹಮೀದ್ ಕಾರುಚಾಲಕ ನಿತಿನ್ ಗೆ ಅವ್ಯಾಚ್ಯವಾಗಿ ಬೈದು ಸ್ಕ್ರೂಡ್ರೈವರ್ ನಿಂದ ತಿವಿದು ಕೊಲೆಗೆ ಯತ್ನಿಸಿದ್ದಾನೆ ಎಂದು ಅವರು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಿತಿನ್ ಪಕ್ಕಳ ಅವರು ತಮ್ಮ ಕಾರಿನಲ್ಲಿ ಸ್ನೇಹಿತರೊಂದಿಗೆ ಮೂಡಬಿದಿರೆಯ ಮಿಜಾರು ಕಡೆಗೆ ತೆರಳುತ್ತಿದ್ದಾಗ ವೇಳೆ ಮೆಲ್ಕಾರ್ ನಲ್ಲಿ ಈ ಘಟನೆ ನಡೆದಿತ್ತು. ನಿತಿನ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಸಾಹುಲ್ ಹಮೀದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಡುವೆ ಸಾಹುಲ್ ಹಮೀದ್ ಕೂಡ ನಿತಿನ್ ವಿರುದ್ಧ ಪ್ರತಿದೂರು ನೀಡಿದ್ದು,ಪ್ರಕರಣ ದಾಖಲಾಗಿದೆ